ಅರಸೀಕೆರೆ : ಮಾಡಾಳು ರಾಜ್ಯದಲ್ಲಿಯೇ ಇತಿಹಾಸ Iಪ್ರಸಿದ್ದಿಹೊಂದಿರುವ ಪುಣ್ಯಕ್ಷೇತ್ರ ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣಗೌರಮ್ಮ ದೇವಿ ದೇವಾಲಯ ದಲ್ಲಿ ಬಾದಾಮಿ ಅಮಾವಾಸ್ಯೆ ಅಂಗವಾಗಿ ಅಮ್ಮನವರಿಗೆ ವಿಶೇಷ ಪೂಜೆಎನ್ನು ನೂರಾರು ಭಕ್ತರ ಸಮ್ಮುಖದಲ್ಲಿಶ್ರದ್ಧಾ ಭಕ್ತಿ ಭಾವದಿಂದ ಶನಿವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.

ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಂಕಲ್ಪದಂತೆ ಲೋಕಕಲ್ಯಾಣಾ ರ್ಥವಾಗಿ ಪ್ರತಿ ತಿಂಗಳು ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ ಆದರೆ ಈ ಬಾರಿ 12 ವರ್ಷಕ್ಕೊಮ್ಮೆ ಬರುವ ಬಾದಾಮಿ ಅಮಾ ವಾಸ್ಯೆಯ ನಿಮಿತ್ತ ಅಮ್ಮನವರನ್ನು ನಾನಾ ಹೂಗಳಿಂದ ಅಲಂಕರಿಸಿದ್ದು ವಿಶೇಷವಾಗಿತ್ತು.

ಪೂಜೆ ನಿಮಿತ್ತ ದೇವಾಲಯವನ್ನು ಮಾವಿನ ತಳಿರು ತೋರಣ ಬಾಳೆಕಂದುಗಳಿಂದ ಸಿಂಗರಿಸಿದ್ದು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು ಈ ದೃಶ್ಯ ನೋಡು ಗರ ಕಣ್ಮನ ಸೆಳೆಯಿತು.

ಕೋಡಿಮಠದಲ್ಲಿ ನಿರ್ವಿಕಲ್ಪ ಯೋಗ ಸಮಾಧಿಯಲ್ಲಿರುವ ಮಹಾ ತಪಸ್ವಿ ಶ್ರೀ ಶಿವಲಿಂಗ ಜ್ಯ ಯ್ಯ ನವರು ಒಂದು ಕೋಟಿ ಜಪ ಮಾಡಿ ಸಿದ್ಧಿಸಿದ ಬಂಗಾರದ ಮೂಗುತಿಯನ್ನು ದೇವಿಗೆ ಆಶೀರ್ವದಿಸಿ ನೀಡಿದ್ದು ಗೌರಿ ಹಬ್ಬದಂದು ಅದನ್ನು ದೇವಿಗೆ ಧಾರಣೆ ಮಾಡಿ ದಾಗ ಸಾಕ್ಷಾತ್ ಪಾರ್ವತಿ ರೂಪದಿಂದ ಕಂಗೊಳಿಸಲಿದ್ದಾರೆ ಎಂದು ಶ್ರೀಗಳು ಭಕ್ತರಿಗೆ ತಿಳಿಸಿದ್ದರಂತೆ.

ಆ ಮೂಗುತಿ ಮಹಿಮೆಯಿಂದ ದೇವಿ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತ ರಾಜ್ಯದಲ್ಲಿಯೇ ಶಕ್ತಿ ದೇವತೆಯೆಂದು ಹೆಸರು ಪಡೆದು ಭಕ್ತರ ಮನೆ ಮನದಲ್ಲಿ ನೆಲೆ ನಿಂತಿದ್ದಾರೆ ಎಂಬ ಪ್ರತೀತಿ ಕೋಡಿಮಠ ಮಹಾಸಂಸ್ಥಾನದ ವತಿಯಿಂದ ದೇವಿಗೆ ನೂತನವಾಗಿ ದೇವಾಲಯ ನಿರ್ಮಿಸುವ ಮೂಲಕ ಧಾರ್ಮಿಕತೆಗೆ ಮಹತ್ವ ನೀಡಲಾಗಿದೆ.

ಅಮ್ಮನವರ ಭಕ್ತಿಯು ಸಮಾಜದಲ್ಲಿ ಸಮಾನತೆಮತ್ತು ಸಹಬಾಳ್ವೆಯ ಸಂದೇಶ ನೀಡುತ್ತಿದೆ ರಾತ್ರಿ 8:30 ಗಂಟೆಗೆ ಸರಿಯಾಗಿ ಗೌರಮ್ಮ ದೇವಿ ಶ್ರೀ ಶಿವಲಿಂಗ ಜ್ಜಯ್ಯಮೂರ್ತಿ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಗೆ ಅರ್ಚಕರು ಕರ್ಪೂರದ ಮಹಾಮಂಗಳಾರತಿಯನ್ನುಬೆಳಗಿದರು ನಂತರ ಬಂದ ಭಕ್ತಾದಿಗಳಿಗೆಬೆಂಗಳೂರಿನ ನಿವಾಸಿ ಸಾಗರ್ ಪರಮಶಿವಯ್ಯ ಹಾಗೂ ಕಾವ್ಯ ಶ್ರೀ ಡಿಎಸ್ ದೊಡ್ಡ ಎಣ್ಣೇಗೆರೆ ಇವರ ವತಿಯಿಂದದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು

ಮಾಡಾಳು ಗ್ರಾಮವು ಸೇರಿದಂತೆ ಹಾರನಹಳ್ಳಿ ಅಣ್ಣಾಯಕನಹಳ್ಳ ಯೆಳವಾರೆ ಸೀತಾಪುರ ಕೊಪ್ಪಲು ಎರೇಹಳ್ಳಿ ಡಿಎ೦ ಕುರ್ಕೆಶಶಿವಾಳ ವೈಜಿಹಳ್ಳಿ ಪಿ ಹೊಸಳ್ಳಿ ಕಿತ್ತನಕೆರೆ ದೋಣನಕಟ್ಟೆ ಬೊಮ್ಮಸಮುನದ್ರ ಕಡಲ ಮಗೆ ಶಂಕರನಹಳ್ಳಿ ಮುಂತಾದ ಗ್ರಾಮಸ್ಥರು ಆಗಮಿಸಿ ದೇವಿ ದರ್ಶನ ಪಡೆದು ಪುನಿತಾರಾದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed