ಸಕಲೇಶಪುರ : ಮುಸಲ್ಮಾನರ ಬಕ್ರೀದ್ ಹಬ್ಬದ ಆಚರಣೆಯಲ್ಲಿ ಗೋ ಸಂತತಿಯ ಹತ್ಯೆ ಹಾಗೂ ಅಕ್ರಮ ಗೋ ಸಾಗಾಟವನ್ನು ತಡೆದು ಗೋ ಸಂತತಿಯನು ಉಳಿಸಿ ಹಿಂದೂಗಳ ಭಾವನೆಗೆ ದಕ್ಕೆ ಬರದಂತೆ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರ ಗಮನ ವಹಿಸಿ ಅಕ್ರಮ ಗೋ ಸಾಗಾಟ ಹಾಗೂ ಹತ್ಯೆಯನ್ನು ತಡೆಯ ಬೇಕಾಗಿ ವಿಶ್ವ ಹಿಂದೂ ಪರಿಷದ್-ಬಜರಂಗದಳ ವತಿಯಿಂದ ಮನವಿ ಸಲ್ಲಿಸಲಾಯಿತು.

ಪೊಲೀಸ್ ಇಲಾಖೆಗೆ ಹೆಚ್ಚುವರಿ ಚೆಕ್ ಪೋಸ್ಟ್ ನಿರ್ಮಿಸಿ ಅನುಮಾನಾಸ್ಪದ ಎಲ್ಲಾ ವಾಹನಗಳ ಪರಿಶೀಲನೆ ಯಾಗಬೇಕು ಹಾಗೂ ಹಳೆಯ ಗೋ ಹತ್ಯೆ ಪ್ರಕರಣದಲ್ಲಿ ಶಾಮೀಲಾದ ವ್ಯಕ್ತಿಗಳನ್ನು ಕರೆದು ಸೂಚನೆಗಳನ್ನು ನೀಡಬೇಕು ಹಾಗೂ ಬಾಂಡ್ ಮುಖಾಂತರ ಹೊರಬಂದಿರುವ ಗೋಸಾಗಟ ಮಾಡುತ್ತಿದ್ದಂತಹ ವಾಹನಗಳ ಮಾಲೀಕರಿಗೂ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ನೀಡಬೇಕು ಗೋ ಸಂತತಿಯ ರಕ್ಷಣೆಗೆ ಪೋಲಿಸ್ ಇಲಾಖೆ ಕಾನೂನಿನ ರೀತಿಯಲ್ಲಿ ಸಹಕರಿಸಬೇಕೆಂದು ಮನವಿ ಸಲ್ಲಿಸಲಾಯಿತು.

ಈ ಮನವಿಗಳನ್ನು ತಾಲೂಕು ಉಪ ವಿಭಾಗ ಅಧಿಕಾರಿಗಳಿಗೆ ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವೃತ್ತ ನಿರೀಕ್ಷಕರು ಗ್ರಾಮಾಂತರ ಮತ್ತು ನಗರ ಠಾಣೆಗಳಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷದ್ ಹಾಸನ ಜಿಲ್ಲಾ ಸಹಕಾರ್ಯದರ್ಶಿಗಳಾದ ಹರೀಶ್ ಕರಡಿಗಾಲ . ಬಜರಂಗದಳ ಜಿಲ್ಲಾ ಸಹ ಸಂಯೋಜಕ ವಿಷ್ಣು ಸಕಲೇಶಪುರ. ಜಿಲ್ಲಾ ಸುರಕ್ಷಾ ಪ್ರಮುಖ್ ರಘುಪ್ರಸಾದ್. ತಾಲೂಕು ಅಧ್ಯಕ್ಷರಾದ ಬಾಲಕೃಷ್ಣ. ತಾಲೂಕು ಸಂಯೋಜಕರಾದ ಸುಜನ್ ಗೌಡ್ರು. ಹೆತ್ತೂರು ಪ್ರಖoಡದ ಅಧ್ಯಕ್ಷರಾದ ರವಿತೇಜ ಕಾರ್ಯದರ್ಶಿಗಳದ ಸುರೇಶ್. ಸಕಲೇಶಪುರ ಕಾರ್ಯದರ್ಶಿಗಳಾದ ರವಿ ಹಾರ್ಲೆ ಕೂಡಿಗೆ . ನಗರ ಅಧ್ಯಕ್ಷರಾದ ಮಹೇಂದ್ರ ಕುಮಾರ್. ಪ್ರೀತಮ್. ರಘು ಚಂಪಕನಗರ.ಆಟೋ ರವಿ ಅಣ್ಣ ಇನ್ನು ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed