ಸಕಲೇಶಪುರ, ಜೂ. 11: ಸನಾತನ ಸೇವಾ ಟ್ರಸ್ಟ್ ವತಿಯಿಂದ ಬೇಲೂರಿನ ಶ್ರೀ ಚನ್ನಕೇಶವ ನೇತ್ರಾಲಯದ ಸಹಯೋಗದೊಂದಿಗೆ ಗುರುವಾರ ಸಕಲೇಶಪುರದ ಪುರಭವನದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಸುಮಾರು 220ಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡು ಕಣ್ಣಿನ ತಪಾಸಣೆ ಮಾಡಿಸಿಕೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ರೈತ ಧರಣೀಶ್, ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕಣ್ಣಿನ ಆರೋಗ್ಯವು ಜೀವನದ ಗುಣಮಟ್ಟವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದ್ದು, ನಿಯಮಿತವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಸನಾತನ ಸೇವಾ ಟ್ರಸ್ಟ್ ಹಾಗೂ ಶ್ರೀ ಚನ್ನಕೇಶವ ನೇತ್ರಾಲಯ ಗ್ರಾಮೀಣ ಭಾಗದ ಜನರಿಗೆ ಉಚಿತ ಸೇವೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ಬಿಜೆಪಿ ಮುಖಂಡ ಜೈ ಮಾರುತಿ ದೇವರಾಜ್, ಸನಾತನ ಸೇವಾ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಮಂಜುನಾಥ್ ಸಂಘಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬೇಲೂರಿನ ಶ್ರೀ ಚನ್ನಕೇಶವ ನೇತ್ರಾಲಯದ ವೈದ್ಯರಾದ ಡಾ. ಗಿರೀಶ್ ಹಾಗೂ ಪಾಂಡುರಂಗ ಆರಾಧ್ಯ ಅವರು ಸಾರ್ವಜನಿಕರ ಕಣ್ಣಿನ ತಪಾಸಣೆ ನಡೆಸಿ ಸೂಕ್ತ ಸಲಹೆ ಮತ್ತು ಚಿಕಿತ್ಸಾ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನಾತನ ಸೇವಾ ಟ್ರಸ್ಟ್ ಅಧ್ಯಕ್ಷ ಕೊಲ್ಲಳ್ಳಿ ಬಾಲರಾಜ್ ವಹಿಸಿದ್ದರು. ಕಾರ್ಯದರ್ಶಿ ಹೆಬ್ಬನಹಳ್ಳಿ ಸಂದೇಶ್, ಸಹ ಕಾರ್ಯದರ್ಶಿ ಅನೀಲ್ ಸಂಪಗೋಡು, ಉಪಾಧ್ಯಕ್ಷರಾದ ಅಗಲಹಟ್ಟಿ ಕುಮಾರಸ್ವಾಮಿ ಹಾಗೂ ಪುಟ್ಟಸ್ವಾಮಿಗೌಡ, ಖಜಾಂಚಿ ರುದ್ರಶೆಟ್ಟಿ ಮತ್ತು ಸದಸ್ಯರಾದ ಎಸ್.ಎ. ಮೋಹನ್, ರಘುಗೌಡ, ಚೇತನ, ಲೋಹಿತ್ ಜಂಭರಡಿ, ಕುಸುಮ, ಜೈರಾಜ್, ಲೋಕೇಶ್ ಜಾನಜೇರೆ, ಜಯೇಂದ್ರಕುಮಾರ್, ಮಲ್ಲಗದ್ದೆ ಸಂಪತ್, ವಡ್ರಹಳ್ಳಿ ಯೋಗೇಶ್, ಗಾಯತ್ರಿ, ಕರಡಿಗಾಲ ಕಿರಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಭಾಗವಹಿಸಿದ ಸಾರ್ವಜನಿಕರು ಉಚಿತ ನೇತ್ರ ತಪಾಸಣೆ ಸೌಲಭ್ಯದ ಪ್ರಯೋಜನ ಪಡೆದುಕೊಂಡು ಸಂಘಟಕರ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿಯೂ ಇಂತಹ ಸಮಾಜಮುಖಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *