
ಸಕಲೇಶಪುರ :- ನಾಡಿನ ಸಮಸ್ತ ಜನತೆಗೆ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ ಎಂದು ಜ್ಞಾನಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರು ಹಾಗೂ ಬಿಜೆಪಿ ಮುಖಂಡರಾದ ಕಾಮನಹಳ್ಳಿ ತೀರ್ಥನಂದ (ಕೀರ್ತಿ) ತಿಳಿಸಿದ್ದಾರೆ.
ಯೋಗವು ಕೇವಲ ವ್ಯಾಯಾಮವಲ್ಲ, ಅದು ದೈಹಿಕ ಆರೋಗ್ಯ, ಮಾನಸಿಕ ಶಾಂತಿ ಹಾಗೂ ಆತ್ಮಸ್ಥೈರ್ಯವನ್ನು ವೃದ್ಧಿಸುವ ಭಾರತದ ಅಮೂಲ್ಯ ಪರಂಪರೆಯಾಗಿದೆ. ಇಂದಿನ ಒತ್ತಡದ ಜೀವನಶೈಲಿಯಲ್ಲಿ ಆರೋಗ್ಯಕರ ಮತ್ತು ನೆಮ್ಮದಿಯ ಬದುಕಿಗೆ ಯೋಗವು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಯತ್ನಗಳ ಫಲವಾಗಿ ಭಾರತೀಯ ಸಂಸ್ಕೃತಿಯ ಯೋಗ ಇಂದು ವಿಶ್ವದಾದ್ಯಂತ ಗೌರವ ಪಡೆದಿದ್ದು, ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ.ಈ ಬಾರಿಯ ಯೋಗ ದಿನದ ಧ್ಯೇಯವಾಕ್ಯವಾದ “Yoga for Healthy Ageing” ಜೀವನದ ಪ್ರತಿಯೊಂದು ಹಂತದಲ್ಲೂ ಆರೋಗ್ಯ, ಚೈತನ್ಯ ಮತ್ತು ಸ್ವಾವಲಂಬಿ ಬದುಕಿನ ಮಹತ್ವವನ್ನು ಸಾರುತ್ತದೆ.ಆದ್ದರಿಂದ ಯೋಗವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ಪ್ರತಿದಿನದ ಜೀವನದ ಭಾಗವನ್ನಾಗಿ ಮಾಡಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಅವರು ಕರೆ ನೀಡಿದ್ದಾರೆ.
ಶುಭಾಶಯಗಳೊಂದಿಗೆ,ಕಾಮನಹಳ್ಳಿ ತೀರ್ಥನಂದ (ಕೀರ್ತಿ)ಸಂಸ್ಥಾಪಕರು, ಜ್ಞಾನಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಬಿಜೆಪಿ ಮುಖಂಡರು
