ಮೈಸೂರು ಜಿಲ್ಲೆಯ ಟಿ ನರಸೀಪುರದ ಬೆಳಕು ಚಾರಿಟಬಲ್ ಟ್ರಸ್ಟ್ (NGO) ವತಿಯಿಂದ ಜ್ಞಾಪಕಶಕ್ತಿ ಹಾಗೂ ಬಾಲ ಪ್ರತಿಭೆಯನ್ನು ಗುರುತಿಸಿ ನೀಡಲಾಗುವ ಪ್ರಶಸ್ತಿಗೆ ಆರ್ವಿ ಆಯ್ಕೆಯಾಗಿದ್ದಾಳೆ.

ರಾಜ್ಯದ ವಿವಿಧ ಭಾಗಗಳಿಂದ ಬಂದ ಸಾವಿರಾರು ಅರ್ಜಿಗಳ ಪೈಕಿ ಆರ್ವಿ ಅತ್ಯಂತ ಕಿರಿಯ ಪ್ರತಿಭೆಯಾಗಿದ್ದು, ಹಾಸನ ಜಿಲ್ಲೆಯಿಂದ ಹಾಗೂ ಸಕಲೇಶಪುರ ತಾಲ್ಲೂಕಿನಿಂದ ಆಯ್ಕೆಯಾದ ಏಕೈಕ ಬಾಲ ಪ್ರತಿಭೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಪ್ರಸ್ತುತ ಆರ್ವಿ 2026ರ ಜೂನ್‌ನಿಂದ ಪೋದಾರ್ ಪ್ರೆಪ್ – ಜಂಬೂ ಕಿಡ್ಸ್ ಆಕ್ಸ್‌ಫರ್ಡ್ ಶಾಲೆಯಲ್ಲಿ ಎಲ್‌ಕೆಜಿ ವ್ಯಾಸಂಗ ಮಾಡುತ್ತಿದ್ದಾಳೆ.

ಈ ಹಿಂದೆ ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯ (Ministry of Defence) ವತಿಯಿಂದ ನ್ಯಾಷನಲ್ ಐಕಾನ್ ಅವಾರ್ಡ್ (Educationalist ವಿಭಾಗ), ಪ್ರೈಡ್ ಆಫ್ ಕರ್ನಾಟಕ ಅವಾರ್ಡ್, 64ನೇ ಗಣಪತಿ ಸಮಿತಿಯಿಂದ ಬಾಲ ಪ್ರತಿಭೆ ಪ್ರಶಸ್ತಿ, ಹಾಸನದಲ್ಲಿ ನಡೆದ ಕವಿ ನಮನ–ಗಮಕ ನಮನ ಸಾಹಿತ್ಯ ಸಮ್ಮೇಳನ, ಸಕಲೇಶಪುರದ ಹನುಮ ಜಯಂತಿ, ಕನ್ನಡ ಸಾಹಿತ್ಯ ಸಮ್ಮೇಳನ, ಹೊಳೆಮಲ್ಲೇಶ್ವರ ದೇವಸ್ಥಾನದ ಶಿವರಾತ್ರಿ ಕಾರ್ಯಕ್ರಮ, ಸಿದ್ಧಗಂಗಾ ಮಠ ಹಾಗೂ ಸುತ್ತೂರು ಮಠಗಳಲ್ಲಿ ಸನ್ಮಾನ ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾಳೆ.

ಆರ್ವಿಯ ಈ ಸಾಧನೆಗೆ ತಾಯಿ ವಿಜಯಲಕ್ಷ್ಮಿ ಅವರು ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡುತ್ತಿದ್ದು, ಅವರ ಪ್ರೋತ್ಸಾಹ ಪ್ರಮುಖ ಕಾರಣವಾಗಿದೆ.

ಅತೀ ಕಿರಿಯ ವಯಸ್ಸಿನಲ್ಲೇ ಹಲವು ಸಾಧನೆಗಳನ್ನು ಮಾಡಿ ಸಕಲೇಶಪುರ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸುತ್ತಿರುವ ಬಾಲ ಪ್ರತಿಭೆ ಆರ್ವಿ ಕೆ. ಅವರ ಮುಂದಿನ ಸಾಧನೆಗೆ ಸಾರ್ವಜನಿಕರು, ಆಚಂಗಿ ಗ್ರಾಮಸ್ಥರು, ಬಂಧುಗಳು ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *