ಹೆತ್ತೂರು: ದಿ ಹೆತ್ತೂರು ಕ್ಲಬ್‌ನ ನೂತನ ಅಧ್ಯಕ್ಷರಾಗಿ ಸುಧೀರ್ ಕುಮಾರ್ ಹೆತ್ತೂರು ಹಾಗೂ ಉಪಾಧ್ಯಕ್ಷರಾಗಿ ಎಚ್.ಪಿ. ಗಿರೀಶ್ ಅವರು ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಎಚ್.ಡಿ. ಕಿಶೋರ್ ಹಾಗೂ ಖಜಾಂಜಿಯಾಗಿ ಬಿ.ಡಿ. ಪವನ್ ಅವರನ್ನು ಆಯ್ಕೆ ಮಾಡಲಾಗಿದೆ.

ಕ್ಲಬ್‌ನ ಕಾರ್ಯಕಾರಿ ಮಂಡಳಿಗೆ ಬಾಲಸುಬ್ರಮಣ್ಯ, ಕೆಂಪೇಗೌಡ, ಲೋಹಿತ್, ಅಣ್ಣಯ್ಯ, ಗೋದ್ದು ಗೋಪಿ, ಅನಂತ ಹಾಗೂ ದಿವಾಕರ ಸೇರಿದಂತೆ ಒಟ್ಟು 11 ಮಂದಿ ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಕೃಷಿ ಸಹಕಾರ ಸಂಘ ಕೂಡುರಸ್ತೆ ಅಧ್ಯಕ್ಷ ಗೋದ್ದು ಕೌಶಿಕ್, ರಾಜ್ಯ ಯಲಕ್ಕಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಕುಸಲಪ್ಪ, ಕ್ಲಬ್‌ನ ಮಾಜಿ ಅಧ್ಯಕ್ಷ ಅಶೋಕ್, ಮಾಜಿ ಕಾರ್ಯದರ್ಶಿ ಅನಂತ ಪ್ರಸಾದ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಟಿ. ಮಲ್ಲೇಶ್, ಮಾಜಿ ಎಪಿಎಂಸಿ ಅಧ್ಯಕ್ಷ ಗೋವಿಂದೇಗೌಡ, ಅಶೋಕ ಬಾಚಿಹಳ್ಳಿ, ಬೆಂಗಳೂರಿನ ಉದ್ಯಮಿ ಕೊಂಡಗದ್ದೆ ಹರಿಸ್, ಕೃಷಿ ಸಹಕಾರ ಸಂಘದ ಸದಸ್ಯ ಎಚ್.ಡಿ. ಪ್ರತಾಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇದಲ್ಲದೆ ಕೆ.ಬಿ. ಮಲ್ಲೇಶ್, ಉಮೇಶ್ ಹಾಡ್ಲಹಳ್ಳಿ .ಕೀರ್ತಿ ಉದಯ, ವಿಶ್ವ, ಲಿಕಿ, ಮಂಜ ಹೊರಟ್ಟಿ, ದೇವರಾಜ್, ಸತೀಶ್, ಸಚಿನ್, ಅನಿಲ್, ಚಂದ್ರಶೇಖರ, ದರ್ಶನ, ಮಲ್ಲಪ್ಪ ಹಾಡ್ಲಹಳ್ಳಿ, ಸುನಿಲ್ ,ಸತೀಶ್, ಗಣೇಶ್, ಹೇಮಾಣ್ಣ ಕಾಫಿ ಲಿಂಕ್ಸ್‌, ಗಗನ ಹೆತ್ತೂರು ಸೇರಿದಂತೆ ಕ್ಲಬ್‌ನ ಸದಸ್ಯರು ಭಾಗವಹಿಸಿದ್ದರು.

ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರಿಗೆ ಕ್ಲಬ್‌ನ ಸದಸ್ಯರು ಅಭಿನಂದನೆ ಸಲ್ಲಿಸಿದರು.

ನೂತನ ತಂಡದ ನೇತೃತ್ವದಲ್ಲಿ ದಿ ಹೆತ್ತೂರು ಕ್ಲಬ್‌ ಮತ್ತಷ್ಟು ಚಟುವಟಿಕೆಗಳನ್ನು ಹಮ್ಮಿಕೊಂಡು, ಸದಸ್ಯರ ಹಿತಾಸಕ್ತಿ ಹಾಗೂ ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ವಿಶ್ವಾಸ ವ್ಯಕ್ತವಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed