
ಸಕಲೇಶಪುರ: ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಕಾನೂನು ಸಲಹೆಗಾರರಾಗಿ ವಕೀಲ ಸುದೀಶ್ ಎಸ್. ಪರಮೇಶ್ ಅವರನ್ನು ನೇಮಕ ಮಾಡಲಾಗಿದೆ.
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಕಾರ್ಯಕಾರಿ ಮಂಡಳಿಯ ಸರ್ವಾನುಮತದ ಒಪ್ಪಿಗೆಯ ಮೇರೆಗೆ 2026ರಿಂದ 2028ನೇ ಸಾಲಿನವರೆಗೆ ಅವರನ್ನು ಕಾನೂನು ಸಲಹೆಗಾರರಾಗಿ ನೇಮಕ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಸಕಲೇಶಪುರದಲ್ಲಿರುವ ಪ್ಲಾಂಟರ್ಸ್ ಸಂಘದ ಕಚೇರಿಯಲ್ಲಿ ವಕೀಲ ಸುದೀಶ್ ಎಸ್. ಪರಮೇಶ್ ಅವರಿಗೆ ನೇಮಕಾತಿ ಆದೇಶದ ಪ್ರತಿಯನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಎಚ್‌ಡಿಪಿಎ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹೆಗ್ಗೋವೆ ಪುಟ್ಟರಾಜು, ಉಪಾಧ್ಯಕ್ಷ ಸಚಿನ್, ಖಜಾಂಜಿ ಲೋಕೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
