ಸಕಲೇಶಪುರ: ರೋಟರಿ ಕ್ಲಬ್ ಸಕಲೇಶಪುರ ಹಾಗೂ ವಾಸನ್ ಐ ಕೇರ್, ಹಾಸನ ಇವರ ಸಹಯೋಗದಲ್ಲಿ ನವೆಂಬರ್ 26, ಗುರುವಾರದಂದು ಉಚಿತ ಸಮಗ್ರ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರವು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಕಲೇಶಪುರದ ಸರ್ಕಾರಿ ಆಸ್ಪತ್ರೆ ಎದುರಿರುವ ರೋಟರಿ ಸಮುದಾಯ ಭವನದಲ್ಲಿ ನಡೆಯಲಿದೆ.

ಕಣ್ಣಿನ ಪೊರೆ (ಕ್ಯಾಟರಾಕ್ಟ್) ಸೇರಿದಂತೆ ಕಣ್ಣಿನ ಸಮಸ್ಯೆಗಳ ಕುರಿತು ಸಮಗ್ರ ತಪಾಸಣೆ ನಡೆಸಲಾಗುತ್ತಿದ್ದು, ನುರಿತ ನೇತ್ರ ತಜ್ಞರು ಶಿಬಿರದಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ತಪಾಸಣೆ ಹಾಗೂ ಸಲಹೆ ನೀಡಲಿದ್ದಾರೆ.

ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಸಕಲೇಶಪುರ ತಾಲೂಕಿನ ಸಮಸ್ತ ನಾಗರಿಕರು ಈ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ರೋಟರಿ ಕ್ಲಬ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಸ್ಥಳ: ರೋಟರಿ ಸಮುದಾಯ ಭವನ, ಸಕಲೇಶಪುರ (ಸರ್ಕಾರಿ ಆಸ್ಪತ್ರೆ ಎದುರು)ದಿನಾಂಕ: 26-11-2026, ಗುರುವಾರಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ.

ಸ್ಥಳ: ರೋಟರಿ ಸಮುದಾಯ ಭವನ, ಸಕಲೇಶಪುರ (ಸರ್ಕಾರಿ ಆಸ್ಪತ್ರೆ ಎದುರು)ದಿನಾಂಕ: 26-11-2026, ಗುರುವಾರ

ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ

ಇಂತಿ,ರವಿಕುಮಾರ್ – ಅಧ್ಯಕ್ಷರುಎಚ್.ಆರ್. ದಯಾನಂದ್ – ಕಾರ್ಯದರ್ಶಿಗಳುರೋಟರಿ ಕ್ಲಬ್, ಸಕಲೇಶಪುರ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *