ಸಕಲೇಶಪುರ : ಮೇ 31 ರಂದು ಕರ್ನಾಟಕ ರಾಜ್ಯದ ನೂತನ ಅರಣ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿದ ಮುರಳಿ ಮೋಹನ್ ಅವರು ಹಾಸನ ವಿಭಾಗ ಸಕಲೇಶಪುರ ಆಲೂರು ವಲಯಗಳ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವಂತಹ ಒಂಟಿ ಗಂಡಾನೆಗಳನ್ನು ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸುವಂತೆ ಮಾನ್ಯ ಸಚಿವರೊಂದಿಗೆ ಚರ್ಚಿಸಿದ್ದರು.

ಸಕಲೇಶಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಾಗಿರುವಂತಹ ಆನೆ ಸಮಸ್ಯೆಯ ಬಗ್ಗೆ ಸರ್ಕಾರದಿಂದ ಕ್ರಮ ಕೈಗೊಳ್ಳಬೇಕೆಂದು ಹಾಗೂ ಈ ಸಮಸ್ಯೆಗೆ ಒಂದು ಪರಿಹಾರವನ್ನ ನೀಡಬೇಕು ಎಂದು ಮನವಿ ಪತ್ರವನ್ನು ಸಚಿವರಿಗೆ ನೀಡಿದ್ದರು.

ಇದನ್ನ ಸ್ವೀಕರಿಸಿದಂತಹ ಸಚಿವರು ಖಂಡಿತವಾಗಿಯೂ ಇದಕ್ಕೆ ಒಂದು ಪರಿಹಾರವನ್ನು ಕಲ್ಪಿಸಿ ಕೊಡುತ್ತೇನೆ ಎಂದು ಭರವಸೆಯನ್ನು ನೀಡಿದ್ದರು. ಅದರ ಫಲವಾಗಿ 22/6/2023 ರಂದು ಸರ್ಕಾರದಿಂದ ಆದೇಶವನ್ನ ಹೊರಡಿಸಲಾಗಿದೆ.

ಹಾಸನ ವಿಭಾಗ ಸಕಲೇಶಪುರ ಹಾಗೂ ಆಲೂರು ವಲಯ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವಂತಹ ಒಂಟಿ ಗಂಡಾನೆಳಿಗಳನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಬೇಕೆಂದು ಆದೇಶವನ್ನು ಹೊರಡಿಸಿದ್ದಾರೆ

ಚುನಾವಣೆಯಲ್ಲಿ ಸೋತರೂ ಕೂಡ ಕ್ಷೇತ್ರದ ಹಾಗೂ ಕ್ಷೇತ್ರದ ಜನರ ಸಮಸ್ಯೆ ಬಗ್ಗೆ ಗಮನವಿಟ್ಟುಕೊಂಡು ಕ್ಷೇತ್ರದ ಜನತೆಗೆ ಸೇವೆಯನ್ನ ಸಲ್ಲಿಸಬೇಕೆಂದು ಮೊದಲ ಕೆಲಸವನ್ನಾಗಿ ಕೈಗೆತ್ತಿಕೊಂಡು ಯಶಸ್ವಿಯಾಗಿ ನೆರವೇರಿಸಲು ಮುಂದಾಗುತ್ತಿರುವುದು ಹಾಗೂ ಇವರ ಈ ಕೆಲಸಕ್ಕೆ ತಾಲೂಕಿನದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *