
ಸಕಲೇಶಪುರ ಜನತೆಗೆ ಲಯನ್ಸ್ ಸಂಸ್ಧೆಯಿಂದ ಮತ್ತೊಂದು ಮಹತ್ತರ ಸೇವೆ ಸಿಗುತ್ತಿದ್ದು ತಾಲೂಕಿನ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಗೆ ವಿಶೇಷ ಐಸಿಯು ಕೊಠಡಿಗೆ 10 ಐಸಿಯು ಬೆಡ್ಡುಗಳು ಮತ್ತು ಕೊಠಡಿಯನ್ನು ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು ಇದೇ ತಿಂಗಳ 5 ನೇ ತಾರೀಖಿನಂದು ಬೆಳಿಗ್ಗೆ 10 ಗಂಟೆಗೆ ಗೌರವಾನ್ವಿತ ರಾಜ್ಯಪಾಲರಾದ ಸಂಜೀತ್ಶೆ ಟ್ಟಿ ಅವರು ಸೇವೆಗಾಗಿ ಸಮರ್ಪಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಎಲ್ಲರೂ ಪಾಲ್ಗೊಳ್ಳಬೇಕೆಂದು ಲಯನ್ಸ್ ಸೇವಾ ಸಂಸ್ಥೆಯು ಮನವಿ ಮಾಡಿಕೊಳ್ಳುತ್ತದೆ ಎಂದು ಲಯನ್ಸ್ ಸಂಸ್ಥೆಯ ಅದ್ಯಕ್ಷ ಜಯಶಂಕರ್ ಮನವಿ ಮಾಡಿದ್ದಾರೆ.
