
ಕೆಸರು ಗದ್ದೆಯಾದ ಪ್ರೇಮನಗರ ಮಾರ್ಗವಾಗಿ ಕೌಡಹಳ್ಳಿಗೆ ಹೋಗುವ ರಸ್ತೆ ಇದೀಗ ಅತಿಯಾದ ಮಳೆಯಿಂದಾಗಿ ಮಂಡಿ ಉದ್ದಕ್ಕೆ ಗುಂಡಿಬಿದ್ದಿದ್ದು ಪ್ರತಿನಿತ್ಯ ಕಾಲೇಜ್ , ಸ್ಕೂಲ್ ಹಾಗೂ ಗ್ರಾಮಕ್ಕೆ ತೆರಳುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಸ್ತೆ ಮತ್ತು ಒಳ ಚರಂಡಿ ಮಾಡಿಸದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಕೂಡಲೇ ಈ ರಸ್ತೆಯನ್ನು ಸರಿಪಡಿಸದಿದ್ದರೆ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳ ವಿರುದ್ದ ಹೋರಾಟ ಮಾಡಬೇಕಾಗುತ್ತದೆ ಎಂದು ಕೌಡಳ್ಳಿಯ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು TV46 ವೆಬ್ ಚಾನಲ್ ಗೆ ತಿಳಿಸಿದ್ದಾರೆ.



