
ಹಾಸನ, ಜುಲೈ, 10: ಹಾಸನ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿರುದ್ಧ ಸ್ವಪಕ್ಷದವರೇ ಆದ ಹಾಸನ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಖುರೇಜ್ ಅಸಮಾಧಾನ ಹೊರಹಾಕಿದ್ದಾರೆರೀ ಸ್ವಾಮಿ ಬಿಜೆಪಿಯಲ್ಲಿ ಸುಧಾಕರ್ ಕೆಲಸ ಮಾಡಿರಲಿಲ್ಲವಾ?, ಆದರೆ ಅವರೇ ಸೋತಿದ್ದಾರೆ.
ನೀವು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದರಿಂದಲೇ ಗೆದ್ದಿರುವುದು. ನಿಮಗೆ ಈ ಪಕ್ಷದ ಇತಿಹಾಸ ಗೊತ್ತಿದೆಯಾ? ಎಂದು ಪ್ರಶ್ನಿಸುವ ಮೂಲಕ ಶಿವಲಿಂಗೇಗೌಡ ವಿರುದ್ಧ ಖುರೇಜ್ ಆಕ್ರೋಶ ವ್ಯಕ್ತಪಡಿಸಿದರು.
ನಾವು 15 ವರ್ಷಗಳಿಂದ ಬೇರೆ ಪಕ್ಷದವರ ಜೊತೆ ಗುದ್ದಾಡಿದ್ದೆವೆ. ಯೂಥ್ ಕಾಂಗ್ರೆಸ್ ಅಂದ್ರೆ ತೂತ್ ಕಾಂಗ್ರೆಸ್ ಅಂತಿರೇನ್ರೀ, ನೀವು ಹಿಂಗೆಲ್ಲ ಮೆರಿಬೇಡಿ.
ನಮ್ಮ ಪಕ್ಷಕ್ಕೆ ಇತಿಹಾಸ ಇದೆ. ಜೆಡಿಎಸ್‌ನಿಂದ ಬಂದು ಕಾಂಗ್ರೆಸ್ ನಾಯಕರನ್ನು ತುಳೀತಾ ಇದ್ದೀರಿ. ಇದು ತುಂಬಾ ದಿನ ನೆಡೆಯುವುದಿಲ್ಲ. ನಿಮ್ಮ ಸಿದ್ಧಾಂತವನ್ನು ಅರಸೀಕೆರೆಯಲ್ಲಿ ಇಟ್ಟುಕೊಳ್ಳಿ, ಇಲ್ಲಿ ನೆಡಸಲಿಕ್ಕೆ ಹೋಗಬೇಡಿ ಎಂದು ತರಾಟೆ ತೆಗೆದುಕೊಂಡು.ಜೆಡಿಎಸ್‌ನಿಂದ ಬಂದು ಇಲ್ಲಿ ಆಟ ಆಡಲಿಕ್ಕೆ ಹೋಗಬೇಡಿ, ನಾವು ಪಕ್ಷ ಕಟ್ಟಿದ್ದೇವೆ ಸ್ವಾಮಿ ಎಂದು ಹೇಳುವ ಮೂಲಕ ಅರಸೀಕೆರೆ ಕ್ಷೇತ್ರದ ಶಿವಲಿಂಗೇಗೌಡ ವಿರುದ್ಧ ಸ್ವಪಕ್ಷದವರೇ ಆದ ಖುರೇಜ್ ಹಿಗ್ಗಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
