ಚಂದ್ರನ ಅಂಗಳದಲ್ಲಿ ಮೂರನೇ ಹೆಜ್ಜೆ ಇಡಲು ಭಾರತ ಸಜ್ಜಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಯ ನಿರೀಕ್ಷೆಯಲ್ಲಿರುವ ಇಸ್ರೋಗೆ ಶುಕ್ರವಾರ ಮುಹೂರ್ತ ಕೂಡಿಬಂದಿದೆ. ಭಾರತದ ಚಂದ್ರಯಾನ-3 (Chandrayaan-3) ಗಗನನೌಕೆಯು ಜುಲೈ 14 ರಂದು ಮಧ್ಯಾಹ್ನ 2:35ಕ್ಕೆ ಉಡಾವಣೆಗೊಳ್ಳಲಿದೆ. ಈ ಐತಿಹಾಸಿಕ ಕ್ಷಣವನ್ನು ಆನಂದಿಸಲು ಭಾರತೀಯರು ಕಾತರರಾಗಿದ್ದಾರೆ.

ಚಂದ್ರಯಾನ-3 ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಉಡಾವಣೆ ಮಾಡಲಾಗುವುದು. ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ಬಳಸಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಗಗನನೌಕೆಯನ್ನು ಇಳಿಸಲಾಗುವುದು.

ಚಂದ್ರನ ಗಾತ್ರ ಭೂಮಿಗಿಂತ 4 ಪಟ್ಟು ಚಿಕ್ಕದುಭೂಮಿಯನ್ನುಳಿದು ಮಾನವರು ನಡೆದಾಡಿದ ಏಕೈಕ ಆಕಾಶಕಾಯವೆಂದರೆ ಅದು ಚಂದ್ರ. ಭೂಮಿ ಮತ್ತು ಚಂದ್ರನ ನಡುವಿನ ದೂರವು 3,84,399 ಕಿಮೀ ಇದೆ. ಚಂದ್ರನ ವ್ಯಾಸವು 2,159 ಮೈಲಿಗಳಷ್ಟಿದೆ ಅಂದರೆ ಭೂಮಿಗಿಂತ ನಾಲ್ಕು ಪಟ್ಟು ಚಿಕ್ಕದಾಗಿದೆ. ಚಂದ್ರನ ತೂಕ ಭೂಮಿಗಿಂತ 80 ಪಟ್ಟು ಕಡಿಮೆ. ಇದು ಸೌರಮಂಡಲದಲ್ಲಿ 5ನೇ ಅತಿ ದೊಡ್ಡ ಮತ್ತು ಭಾರವಾದ ಉಪಗ್ರಹವಾಗಿದೆ. ಇದು ಭೂಮಿಯನ್ನು ಒಂದು ಸುತ್ತು ಹಾಕಲು 27.3 ದಿನಗಳನ್ನು ತೆಗೆದುಕೊಳ್ಳುತ್ತದೆ. ದೂರದರ್ಶಕದ ಆವಿಷ್ಕಾರದ ನಂತರ ಚಂದ್ರನ ವೀಕ್ಷಣೆಯಲ್ಲಿ ಸಾಕಷ್ಟು ಪ್ರಗತಿಯಾಯಿತು. ಈ ಹೊಸ ಉಪಕರಣವನ್ನು ಗೆಲಿಲಿಯೊ ಗೆಲಿಲಿ ಚೆನ್ನಾಗಿ ಉಪಯೋಗಿಸಿಕೊಂಡು, ಚಂದ್ರನ ಮೇಲ್ಮೈನ ಪರ್ವತಗಳು ಮತ್ತು ಕುಳಿಗಳನ್ನು ಅವಲೋಕಿಸಿದನು. ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರಗಳಾದ ರಷ್ಯಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ ನಡುವೆ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಹೆಚ್ಚಾಯಿತು. ಅದರ ಪ್ರತಿಫಲದಿಂದಲೇ ಅನೇಕ ದೇಶಗಳು ಚಂದ್ರನೂರಿಗೆ ಪ್ರಯಾಣ ಬೆಳೆಸಲು ಸಾಧ್ಯವಾಯಿತು.

ಚಂದ್ರನ ಮೇಲೆ ರಷ್ಯಾ ಮೊದಲ ಹೆಜ್ಜೆಅದು ಶೀತಲ ಸಮರದ ಸಂದರ್ಭ. ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲುಗಲ್ಲು ಸಾಧಿಸಬೇಕು ಎಂದು ರಷ್ಯಾ ಮತ್ತು ಅಮೆರಿಕ ರಾಷ್ಟ್ರಗಳು ಪೈಪೋಟಿ ನಡೆಸಿದ್ದವು. ಈ ಪೈಪೋಟಿಯಲ್ಲಿ ಮೊದಲು ಯಶಸ್ವಿಯಾಗಿದ್ದು ರಷ್ಯಾ. ಆಗ ರಷ್ಯಾವನ್ನು ಸೋವಿಯತ್‌ ಒಕ್ಕೂಟ ಎಂದೇ ಕರೆಯಲಾಗುತ್ತಿತ್ತು (ನಂತರ ಕೆಲವು ದೇಶಗಳು ರಷ್ಯಾದಿಂದ ಸ್ವತಂತ್ರಗೊಂಡವು). ಸೋವಿಯತ್ ಒಕ್ಕೂಟದ ಕಾಲದಲ್ಲೇ (1930) ಆ ದೇಶದ ಬಾಹ್ಯಾಕಾಶ ಸಂಶೋಧನೆ ಆರಂಭವಾಗಿತ್ತು. ಮೊತ್ತ ಮೊದಲ ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸಿದ್ದು ರಷ್ಯನ್ನರು (ಯೂರಿ ಗಗಾರಿನ್- 1961). ಮೊತ್ತ ಮೊದಲ ಪ್ರಾಣಿಯನ್ನು ವ್ಯೋಮಕ್ಕೆ ಕಳಿಸಿದ್ದೂ ಅವರೇ (ಲೈಕಾ ನಾಯಿ- 1957). ಜಗತ್ತಿನ ಮೊತ್ತ ಮೊದಲ ಸ್ಯಾಟ್‌ಲೈಟ್ ಸಿದ್ಧಪಡಿಸಿ ಭೂಮಿ ಸುತ್ತುವಂತೆ ಮಾಡಿದವರೂ ಅವರೇ (ಸ್ಪುಟ್ನಿಕ್ 1- 1957). ಇದರ ಹೊರತಾಗಿ ಮೊದಲ ಬಾರಿಗೆ ಚಂದ್ರನ ಮೇಲೆ ಗಗನನೌಕೆಯನ್ನು ಕಳುಹಿಸುವಲ್ಲಿ ಸೋವಿಯತ್‌ ಒಕ್ಕೂಟ ಯಶಸ್ವಿಯಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *