ಸಕಲೇಶಪುರ:- ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿಯ ಬೊಮ್ಮನಕೆರೆ ಸರ್ಕಾರಿ 15 ಶಾಲಾ ವಿದ್ಯಾರ್ಥಿಗಳಿಗೆ ನಿವೃತ್ತ ತಹಶೀಲ್ದಾರ್ ಶ್ರೀಯುತ ಯು.ಟಿ ರಾಮಯ್ಯ ಹಾಗೂ ಅವರ ಕುಟುಂಬದವರು ಸೇರಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಗೂ ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳ ಬ್ಯಾಗ್ ಹಾಗೂ ಸ್ವೆಟರ್ ಗಳನ್ನು ವಿತರಿಸಲಾಯಿತು .

ನಂತರ ನಿವೃತ್ತ ತಹಶೀಲ್ದಾರ್ ರಾದ ಯು.ಟಿ ರಾಮಯ್ಯ ಮಾತನಾಡಿ ” ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಲು ಪೋಷಕರು ಮುಂದೆ ಬರುತ್ತಿಲ್ಲ. ಇದರಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದ್ದು, ಪ್ರತಿಭಾನ್ವಿತ ಶಿಕ್ಷಕರುಗಳಿರುವ ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುವುದು ಸಾಧ್ಯ. ನಾವು ಸಹ ಸರ್ಕಾರಿ ಶಾಲೆಯಲ್ಲೇ ಓದಿದ್ದು.ಅಲ್ಲದೆ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಪರಿಸ್ಥಿತಿ ಹೇಗೆ ಎಂಬುದನ್ನು ನಾವು ಅರಿತಿದ್ದೇವೆ. ಅದರಿಂದಾಗಿ ವಿದ್ಯಾರ್ಥಿಗಳಿಗೆ ನಮ್ಮ ಈ ಚಿಕ್ಕ ಸಹಾಯ .ಸರ್ಕಾರಿ ಶಾಲೆಗೆ ಜನಪ್ರತಿನಿದಿಗಳು ಆದಷ್ಟು ಸಹಾಯ ಮಾಡಲು ಮುಂದೆ ಬರಬೇಕು . ಇದರಿಂದ ನಮ್ಮ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬಹುದು.” ಎಂದು ಹೇಳಿದರು .

ನಂತರ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ವಾಣಿ ಮಾತನಾಡಿ ಇದುವರೆಗೂ ನಮ್ಮ ಶಾಲೆಗೆ ಯಾವುದೇ ಸಹಾಯ ಮಾಡುವುದಕ್ಕೆ ದಾನಿಗಳು ಮುಂದೆ ಬಂದಿರಲಿಲ್ಲ. ಯು.ಟಿ ರಾಮಯ್ಯ ಹಾಗೂ ಕುಟುಂಬದವರು ನಮ್ಮ ಶಾಲೆಯನ್ನು ಗುರುತಿಸಿ ವಿದ್ಯಾರ್ಥಿಗಳಿಗೆ ಸ್ವೆಟರ್ ಹಾಗೂ ಬ್ಯಾಗುಗಳನ್ನು ಕೊಟ್ಟಿರುವುದು ತುಂಬಾ ಸಂತೋಷದ ವಿಷಯ. ಇದೇ ರೀತಿ ಸರ್ಕಾರಿ ಶಾಲೆಗಳಿಗೆ ಇವರ ಸೇವೆ ಸದಾಕಾಲ ಇರಲಿ ಇದರಿಂದ ಸರ್ಕಾರಿ ಶಾಲೆಗಳು ಹಾಗೂ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದಂತಾಗುತ್ತದೆ. ಎಂದು ಹೇಳಿದರು.

ನಿವೃತ್ತ ತಹಸಿಲ್ದಾರ್ ಯು.ಟಿ ರಾಮಯ್ಯ ಹಾಗೂ ಕುಟುಂಬದವರ ಈ ಸಮಾಜ ಸೇವೆಗೆ ಬೊಮ್ಮನಕೆರೆ ಗ್ರಾಮಸ್ಥರು ಹಾಗೂ ಶಿಕ್ಷಕರುಂಧದವಾರು ಎಸ್. ಡಿ .ಎಂ .ಸಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್. ಡಿ.ಎಂಸಿ ಅಧ್ಯಕ್ಷರಾದ ದೇವರಾಜ್, ಮಾಜಿ SDMC ಅಧ್ಯಕ್ಷರಾದ ರೇಣು ಕುಮಾರ್, ಸಮಾಜ ಸೇವಕರಾದ ವಳಲಹಳ್ಳಿ ಶಾಂತರಾಜು, ಕುಶಾಲನಗರ ಜಿಲ್ಲೆಯ ಮಾಜಿ ಸೈನಿಕರಾದ ಕೃಷ್ಣಪ್ಪ, ಹಾಗೂ ಬೊಮ್ಮನಕೆರೆ ಗ್ರಾಮ ಅಭಿವೃದ್ಧಿ ಸದಸ್ಯ ನಾಗರಾಜ್, ಸೇರಿದಂತೆ ರಾಮಯ್ಯನವರ ಕುಟುಂಬದವರು ಭಾಗಿಯಾದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *