ಸಕಲೇಶಪುರ . ದಿನಾಂಕ 27-06-2023ರಂದು ಹಾಡುಹಗಲೇ ಕಾಮನಹಳ್ಳಿಯ ಎಬಿಸಿ ತೋಟದ ಮುಂದೆ ಇರುವ ಗದ್ದೆಯಲ್ಲಿ ಕಟ್ಟಿದ್ದ 8 ತಿಂಗಳ ಗಬ್ಬದ ಎಮ್ಮೆಯನ್ನು ಪರವಾನಿಗೆ ಇಲ್ಲದ ಬಂದೂಕಿನಿಂದ ಶೂಟ್ ಮಾಡಿರುವುದು ಹಿಂದೂ ಸಮಾಜದ ಭಾವನೆಗೆ ಧಕ್ಕೆ ತರುವಂತಹ ವಿಷಯವಾಗಿದೆ ಎಂದು ಶುಕ್ರವಾರ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಜರಂಗದಳ ರಾಜ್ಯ ಕಾರ್ಯಕಾರಿಣಿ ಸದಸ್ಯ ರಘು ಸಕಲೇಶಪುರ ಹೇಳಿದರು.

ನಂತರ ಮಾತನಾಡಿದ ಇವರು ಅದೇ ರಾತ್ರಿ ದೇಖ್ಲಾ ಗ್ರಾಮಕ್ಕೆ ಹೋದ ಪೋಲೀಸ್ ರವರು ಶೋಧ ಮಾಡಿದಾಗ, ಜಕ್ರಿ ಅಲಿಯಾಸ್ ಜಾಕೀರ್ ಎಂಬುವನ ಮನೆಯಲ್ಲಿಯೂ ಪರವಾನಿಗೆ ಇಲ್ಲದ ಒಂದು ತೋಟದ ಕೋವಿ ಸಿಕ್ಕಿದ್ದು, ಇನ್ನಷ್ಟು ಜನರಿಗೆ ಆತಂಕವಾಗಿದ್ದು, ದೇಖ್ಲಾ ಗ್ರಾಮ ಭಯೋತ್ಪಾದನಾ ಕೇಂದ್ರವಾಗುತ್ತಿದೆ ಎಂದು ಪೋಲಿಸ್ ರವರಿಗೆ ಈ ಹಿಂದೆ ಮಾಹಿತಿ ನೀಡಿತ್ತು ಸಂಘಟನೆ, ಈ ವಿಷಯವಾಗಿ ದಿನಾಂಕ 30-06-2023ರಂದು ಪೋಲಿಸ್ ಅನುಮತಿ ಮೇರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ, ಹಳೆ ಬಸ್ ನಿಲ್ದಾಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ನಾನು ಮಾತನಾಡಿದಾಗ ಅದೇ ಗ್ರಾಮದಲ್ಲಿ ಆಕ್ರಮವಾಗಿ ಇರುವ ಬಂದೂಕುಗಳನ್ನು ಜಪ್ತಿ ಮಾಡಬೇಕು ಮತ್ತು ಅತಿಕ್ರಮಣವಾಗಿ ಅರಣ್ಯದಲ್ಲಿ ನೆಲೆಸಿರುವವರ, ಒತ್ತುವರಿ ಮಾಡಿರುವವರ ಮೇಲೆ ಕ್ರಮವಹಿಸಿ, ಒತ್ತುವರಿ ತೆರವುಗೊಳಸಬೇಕು ಎಂದು ಅರಣ್ಯ ಮತ್ತು ಕಂದಾಯ ಇಲಾಖೆಗೆ ಆಗ್ರಹಿಸಿದ್ದೆ.ಕಾಂಗ್ರೆಸ್‌ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಹಿಂಪಡೆಯಬಾರದೆಂದು ಆಗ್ರಹಿಸಿದ್ದೆ ಆದಿನ ಪ್ರತಿಭಟನೆ ಮುಗಿಸಿ ಎಎಸ್ ಪಿ ಮಿಥುನ್ ರವರಿಗೆ ಮನವಿಯನ್ನು ನೀಡಿ ಶೀಘ್ರದಲ್ಲೇ ಸಫನ್ ಗುಂಡು ಹೊಡೆದವವನ್ನು ಬಂದಿಸಬೇಕು ಎಂದು ಆಗ್ರಹಿಸಲಾಯಿತು

.ದಿನಾಂಕ 30-06-2025ರ ರಾತ್ರಿ 9.40ರ ಸಮಯದಲ್ಲಿ ನನ್ನ ಮನೆಗೆ 75ಕ್ಕೂ ಹೆಚ್ಚು ಪೋಲಿಸ್, ಅರೆಸೇನೆ ಪಡೆಯನ್ನು ನಿಯೋಜಿಸಿ, ನನ್ನ ಮನೆಗೆ ಯಾವುದೇ ಪರಿಶೀಲನೆಗೆ ಅನುಮತಿಯನ್ನು ತರದೆ, ಏಕಾಏಕಿ ಎ.ಎಸ್.ಪಿ. ಮಿಥುನ್‌ ರವರು ಮನೆಗೆ ನುಗ್ಗಿ ವಯಸ್ಸಾದ ನನ್ನ ತಂದೆ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಲ್ಲಿ ನಿಮ್ಮ ಮಗ ಇದ್ದಾನೆ ಹೇಳು, ಇಲ್ಲ ಅಂದ್ರೆ ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ. ಇದರಿಂದ ನನ್ನ ತಂದೆ ತಾಯಿಯ ಆರೋಗ್ಯದಲ್ಲಿ ಏರು ಪೇರು ಹಾಗಿದ್ದು ಇದಲ್ಲದೆ, ನನ್ನ ಮನೆಯ ಸುತ್ತಲಿನ ಮನೆಯವರಿಗೆ ತೊಂದರೆ ನೀಡಿದ್ದಲ್ಲದೆ, ಅವರ ಮನೆಗಳಿಗೂ ಸಹ ರಾತ್ರಿ ಎನ್ನದೆ ಒಳನುಗ್ಗಿದ್ದಾರೆ. ಇದರಿಂದ ಇಡಿ ನಮ್ಮ ಕಾಲೋನಿ ಭಯಭೀತಗೊಂಡಿದೆ. ಸಕಲೇಶಪುರ ನಗರದಲ್ಲಿ ಹಿಂದೆಂದು ಕಾಣದ ರೀತಿಯಲ್ಲಿ ಪೋಲಿಸ್ ನಿಯೋಜಿಸಿ ಭಯದ ವಾತಾವರಣಸೃಷ್ಟಿಸಿದ್ದಾರೆ.

ಜೂನ್ 30 ಮತ್ತು 01 ಜುಲೈರಂದು ಸುದ್ದಿ ನೋಡಿದಾಗ ಪೋಲಿಸ್ ಭಯದ ವಾತಾವರಣ ನಿರ್ಮಾಣ ಮಾಡಿ, ಜನರು ಮನೆಯಿಂದ ಹೊರಗೆ ಬರದ ರೀತಿಯಲ್ಲಿ ಭಯ ಸೃಷ್ಟಿಸಿದ್ದರು. ಕಾರ್ಯಕರ್ತರ ಮನೋಬಲವನ್ನು ಕುಗ್ಗಿಸುವ ಷಡ್ಯಂತ್ರ ಮಾಡಿದ ಮಿಥುನ್‌ರವರು ರಾತ್ರಿ ವೇಳೆ ಯಾವುದೇ ಕೋರ್ಟ್‌ ನಿಂದ ತಪಾಸಣಾ ಪತ್ರ ಮತ್ತು ಎಫ್.ಐ.ಆರ್, ಮಾಡದೆ ಖಾಕಿ ಯಾರ ಮನೆಯೆಂದು ನೊಡದೆ, ಹೆಣ್ಣುಮಕ್ಕಳು ಇದ್ದ ಮನೆಯೊಳಗೆ ನುಗ್ಗಿ ಅವರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿಮ್ಮ ಮಗನನ್ನು ಬೀದಿ ಹೆಣ ಮಾಡುತ್ತೇವೆ ಎಂದು ಬೆದರಿಕೆ ಹಾಕಿರುವುದು ಇಲಾಖೆಗೆ ಕಪ್ಪುಚುಕ್ಕಿ ತರುವಂತಹದ್ದು.ಅವಿನಾಶ್ ಮೂಡಿಗೆರೆ ಯುವ ಮೋರ್ಚ ತಾಲ್ಲೂಕು ಅಧ್ಯಕ್ಷನ ಮನೆಗೆ ನುಗ್ಗಿ ಅವನ ತಾಯಿ, ತಂಗಿಯ ಎದುರ ಮೊಬೈಲ್ ಒಡೆದುಹಾಕಿ, ಅತ್ಯಂತ ಕೀಳುಮಟ್ಟದ ಪದಗಳಿಂದ ಅವ್ಯಾಚವಾಗಿ ನಿಂದಿಸಿ, ಅವನನ್ನು ಸಕಲೇಶಪುರ ಠಾಣೆಗೆ ಕರೆದುಕೊಂಡು ಬಂದು ತಾನು ಅಸ್ತಮ ರೋಗಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದಾಗ ಎ.ಎಸ್.ಪಿ. ಮಿಥುನ್‌ರವರು ಬೂಟ್ ನೆಕ್ಕು ಎಂದು ಹೇಳಿರುವುದು ಒಬ್ಬ ಐಪಿಎಸ್ ಅಧಿಕಾರಿಗೆ ಶೋಭೆ ತರುವಂತದ್ದಲ್ಲ ಮತ್ತು ಅವಿನಾಶ್ ಮೇಲೆ ಶಾರೀರಿಕವಾಗಿ ದೌ‍ರ್ಜನ್ಯ ಮಾಡಿ, ಹಿಂಸೆ ನೀಡಿರುವುದು ಖಂಡನಾರ್ಹರವಿ ಮತ್ತು ವಿನೋದ ಎಂಬ ಕಾರ್ಯಕರ್ತರನ್ನು ಬಂದಿಸಿ ಅವರ ಮೇಲೂ ಸಹ ಶಾರೀರಿಕವಾಗಿ ಹಲ್ಲೆ ಮಾಡಿರುತ್ತಾರೆ ಸಂಘಟನೆಗೆ ಗುರುತಿಸಿಕೊಂಡಿದ್ದ ಮತ್ತು ಸಹಕಾರ ನೀಡುವ 120ಕ್ಕೂ ಹೆಚ್ಚು ಮನೆ ಹಾಗೂ ಚಿಕ್ಕಮಗಳೂರು ಧರ್ಮಸ್ಥಳ ಗುಂಡ್ಯ ಭಾಗದ ಕಾರ್ಯಕರ್ತರಿಗೂ ಬೆದರಿಕೆ ಹಾಕಿರುವುದು ನೋಡಿದರೆ ಮಿಥುನ್‌ ರವರು ಹಿಂದೂ ಸಂಘಟನೆಯನ್ನು ದಮನ ಮಾಡುವ ಗುತ್ತಿಗೆ ಪಡೆದ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಕಾನೂನು ಮತ್ತು ಇಲಾಖೆಗೆ ನಿಷ್ಠೆಯಿಂದ ಕೆಲಸ ಮಾಡಬೇಕಾಗಿದ್ದ ಎ.ಎಸ್.ಪಿ. ಮಿಥುನ್ ಒಂದು ಪಕ್ಷದ ಪರ ಕೆಲಸ ಮಾಡಿ, ಆಮೀಷಕ್ಕೆ ಒಳಗಾಗಿ ಒಂದು ಸರ್ಕಾರಿ ವ್ಯವಸ್ಥೆಯನ್ನು ಬುಡಮೇಲು ಮಾಡಿ, ನಾಗರೀಕರನ್ನು ಭಯಭೀತಗೊಳಸಲು ಸರ್ವ ಪ್ರಯತ್ನ ಮಾಡಿ, ಸರ್ಕಾರಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಸರ್ಕಾರಿ ವಾಹನಗಳನ್ನು ಅತೀ ಹೆಚ್ಚು ಬಳಸಿಕೊಂಡು, ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿದ್ದು, ಏಕೆ ಅದನ್ನು ಹದಗೆಡಿಸಲು ಪ್ರಯತ್ನಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಪತ್ರಿಕಾಗೋಷ್ಠಿ ಯಲ್ಲಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ವಿ ಎಚ್ ಪಿ ಕಾರ್ಯದರ್ಶಿ ಮಂಜುನಾಥ್, ಭಜರಂಗದಳ ಪ್ರಮುಖ್ ಪ್ರತಾಪ್, ಹಾಸನ ಜಿಲ್ಲಾ ಭಜರಂಗದಳ ಸಹ ಸಂಚಾಲಕ ಕೌಶಿಕ್, ತಾಲ್ಲೂಕು ಸಹ ಸಂಯೋಜಕ ಶಿವು, ಮನು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *