
ಸೆಕ್ಸನ್ 4 ಅರಣ್ಯಕ್ಕೆ ನಿಯಮ ಬಾಹಿರವಾಗಿ ಮೋಜು ಮಸ್ತಿ ಮಾಡಲು ಬಂದ ಪ್ರವಾಸಿಗರಿಗೆ ಮೊಕದ್ದಮೆ ದಾಖಲಿಸಿದ ಅರಣ್ಯ ಇಲಾಖೆ. 10 ಜೀಪುಗಳು ವಶಕ್ಕೆ.
ಸಕಲೇಶಪುರ: ನಿಯಮ ಉಲ್ಲಂಘಿಸಿ ನಿಷೇಧಿಸಿದ ಸೆಕ್ಸನ್ 4 ರ ಮೂರು ಕಣ್ಣುಗುಡ್ಡದ ಅರಣ್ಯ ಪ್ರದೇಶದಲ್ಲಿ 10 ಜೀಪುಗಳಲ್ಲಿ ರೈಡಿಂಗ್ ಮಾಡುವ ಮೂಲಕ ಮೋಜು ಮಸ್ತಿ ಮಾಡುತ್ತಿದ್ದ ಬೆಂಗಳೂರಿನ ಪ್ರವಾಸಿಗರಿಗೆ ಕೇಸು ದಾಖಲಿಸುವ ಮೂಲಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶಿಲ್ಪ ಬಿಸಿ ಮುಟ್ಟಿಸಿದ ಘಟನೆ ಶನಿವಾರ ಸಕಲೇಶಪುರ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ನಡೆದಿದೆ.




