
ಶ್ರೀ ಕೆಂಚಾಂಬ ದೇವಸ್ಥಾನ ಹರಿಹಳ್ಳಿ, ಕೆ.ಹೊಸಕೋಟೆ ಹೋಬಳಿ, ಆಲೂರು ತಾಲ್ಲೂಕು. ಸ್ವಸ್ತಿಶ್ರೀ ಶುಭಕೃತ್ ನಾಮ ಸಂವತ್ಸರದ ವೈಶಾಖ ಶುದ್ಧ 3 ಭಾನುವಾರ ದಿನಾಂಕ 23.04.2023 ರಿಂದ ವೈಶಾಖ ಶುದ್ಧ 10 ಭಾನುವಾರ ದಿನಾಂಕ 30.04.2023ರವರೆಗೆ ನಡೆಯಲಿರುವ ಶ್ರೀ ಕೆಂಚಾಂಬಿಕೆಯ ದೊಡ್ಡಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು: ದಿನಾಂಕ : 23.04.2023ನೇ ಭಾನುವಾರ ಜಾತ್ರಾಸಾರು, ಪಾದಪೂಜೆ, ವಸಂತಸೇವೆ ದಿನಾಂಕ : 26.04.2023ನೇ ಬುಧವಾರ ಉಯ್ಯಾಲೆ ಜಾತ್ರೆ (ಪಾದ ತೂಗುವ ಜಾತ್ರೆ) ಉತ್ಸವಾದಿಗಳು ದಿನಾಂಕ : 28.04.2023ನೇ ಶುಕ್ರವಾರ ಉಕ್ಕಂದ, ಪೂಜೆದಿನಾಂಕ : 29.04.2023ನೇ ಶನಿವಾರ ಉದ್ಘಾರ್ಚನೆ, ಸಪ್ತಮಾತೃಕಾಲಂಕಾರ ಜಾತ್ರಾ ಸುಗ್ಗಿದಿನಾಂಕ : 30.04.2023ನೇ ಭಾನುವಾರ ದೊಡ್ಡಜಾತ್ರೆ, ಉತ್ಸವಾದಿಗಳು ಮೇಲ್ಕಂಡ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಹಾಗೂ ಕೆಂಚಾಂಬ ದೇವಾಲಯದ ಪ್ರಾಕಾರದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತನು-ಮನ ಧನ ಸಹಾಯದೊಂದಿಗೆ ಸಹಕರಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದೆ.ತಹಶೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳು, ಆಲೂರು,ವ್ಯವಸ್ಥಾಪನಾ ಸಮಿತಿ ಶ್ರೀ ಕೆಂಚಾಂಬ ದೇವಸ್ಥಾನ, ಹರಿಹಳ್ಳಿ ಸುತ್ತಮುತ್ತಲಿನ 48 ಗ್ರಾಮಗಳ ಗ್ರಾಮಸ್ಥರುಗಳು ಹಾಗೂ ಭಕ್ತಾದಿಗಳು
