
ಸಕಲೇಶಪುರ ತಾಲೂಕಿನ ಕಸಬಾ ಹೋಬಳಿಯ ಹಲಸುಲಿಗೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟಹಳ್ಳಿ, ಗೌತಮನಗರಕ್ಕೆ ಎಸ್.ಇ.ಪಿ ಅನುದಾನದಲ್ಲಿ ನಿರ್ಮಿಸಲ್ಪಟ್ಟ ಹೈಮಾಸ್ಟ್ ವಿದ್ಯುತ್ ದೀಪ ಹಾಗೂ ಸೋಲಾರ್ ದೀಪಗಳಿಗೆ ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಈ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ರಾತ್ರಿ ವೇಳೆಯಲ್ಲಿ ಜನಸಾಮಾನ್ಯರು ತಿರುಗಾಡಲು ಭಯಪಡುತ್ತಿದ್ದರು ಇದನ್ನು ಮನಗಂಡ ಶಾಸಕರು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ದೀಪ ಹಾಗೂ ಸೋಲಾರ್ ದೀಪಗಳನ್ನು ಅಳವಡಿಸುವ ಮೂಲಕ ಅನುಕೂಲ ಕಲ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಹಲಸುಲಿಗೆ ಗ್ರಾಮ ಪಂ ಅಧ್ಯಕ್ಷ ಕೃಷ್ಣ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಲ್ಲವಿ,ಸದಸ್ಯರಾದ ಶೋಭ ,ಶೃತಿ, ಸಮಾಜ ಕಲ್ಯಾಣ ಇಲಾಖೆವಾಧಿಕಾರಿ ಆನಂದ್ ಮೂರ್ತಿ, ಚೆಸ್ಕಾಂ ಎಇಇ ಚಲಪತಿ ರೆಡ್ಡಿ ಪಂಚಾಯತ್ ರಾಜ್ ಕುಶಾಲಪ್ಪ,ವಿದ್ಯುತ್ ಗುತ್ತಿಗೆದಾರ ಪ್ರೇಮನಾಥ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



