ವಿಶ್ವ ವೈದ್ಯರ ದಿನಾಚರಣೆ ಪ್ರಯುಕ್ತ ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ವತಿಯಿಂದ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕ್ಕು ಪಡುವಲಿಪ್ಪೆಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರುಗಳಾದ ಡಾ|| ನಿರಾಜ ಪುರುಷೋತ್ತಮ್, ಡಾ|| ಉಮಾ, ಡಾ|| ನಿಶಿತಾ, ಡಾ|| ನಿಶಾ, ಡಾ||ಲಕ್ಷ್ಮಿ ರವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಅಫ್ ಹಾಸನ್ ರಾಯಲ್ ವತಿಯಿಂದ ಎರಡು ಲಕ್ಷ ಬೆಲೆ ಬಾಳುವ ಐದು ಪಿಬಿ ಪರೀಕ್ಷಿಸುವ ಯಂತ್ರ, ಮತ್ತು ಒಂದು ನೆಬ್ಲೋಸೇಷನ ಯಂತ್ರ ಹಾಗೂ oxygen concentrator ಆಕ್ಸಿಜನ್ ಕಾನ್ಸನ್ಟ್ರೇಟರ್(ಬ್ಲಡ್ ಪ್ರೆಶರ್ ರಕ್ತದೊತ್ತಡದ ಕಂಡುಹಿಡಿವ ಸಾಧನ,ಉಸಿರಾಟದ ತೊಂದರೆಯವರಿಗೆ ಉಸಿರಾಟ ಸರಾಗವಾಗಿ ಮಾಡುವಂತಹ ಪರಿಕರ) ಅನ್ನು ಸದರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾಯಿತು.

ಇದೇ ಸಂದರ್ಭದಲ್ಲಿ ತಮ್ಮ ಹಾಸನ್ ರಾಯಲ್ ಸಂಸ್ಥೆಯ ವಲಯ ಸೇನಾಧಿಯಾದ ರೋ|| ಯೋಗೀಶ್ ಎಸ್, ಅಧ್ಯಕ್ಷರಾದ ರೋ||ಎಚ್.ಆರ್ ನಾಗೇಶ್ ಕಾರ್ಯದರ್ಶಿಯಾದ ರೋ|| ಕೆ.ಎಸ್ ಯೋಗೇಶ್, ಹಾಗು 2024 25 ನೇ ಸಾಲಿನ ಪ್ರೆಸಿಡೆಂಟ್ ಎಲೆಕ್ಟಾದ ರೋ||ಸಚಿನ್ ರವರುಗಳು ಹಾಜರಿದ್ದರು. ಸದರಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *