ಬೆಂಕಿಗೆ ಆಹುತಿ ಅದ ಕಾಫಿ ತೋಟಕ್ಕೆ ಭೇಟಿ ನೀಡಿದ ಹೋಬಳಿ ಬೆಳೆಗಾರ ಸಂಘ:- ಸಕಲೇಶಪುರ:- ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಥಾಳನೇರಿ ಗುಡ್ಡದ ಪ್ರವಾಸಿ ತಾಣವಾದ ಗುಡ್ಡದ ಮೇಲೆ ಬೆಳೆದ ಹುಲ್ಲಿಗೆ ಆಕಸ್ಮಿಕವಾಗಿ ತಗಲಿದ ಬೆಂಕಿಯು , ಗಾಳಿಯ ರಬಸಕ್ಕೆ ಅಕ್ಕ ಪಕ್ಕದಲ್ಲಿದ್ದ ರೈತರ ಕಾಫಿ ತೋಟಗಳಿಗೆ ಹತ್ತಿಕೊಂಡು ಬೆಳೆದು ಫಸಲಿಗೆ ಬಂದಿದ್ದ ಕಾಫಿ ಗಿಡಗಳು ಸೇರಿದಂತೆ ತೋಟದಲ್ಲಿದ್ದ ಇತರೆ ಮರಗಳು ಬೆಂಕಿಗೆ ಆಹುತಿ ಆಗಿದೆ.ಸುತ್ತಮುತ್ತಲಿನ ಪ್ರಕೃತಿ ವೀಕ್ಷಣಾ ಟವರ್ ಪ್ರದೇಶ ಸೇರಿದಂತೆ ರೈತರಿಗೆ ಸೇರಿದ 15 ಎಕರೆಗು ಹೆಚ್ಚಿನ ವಿಸ್ತೀರ್ಣದ ಕಾಫಿತೋಟಗಳು ಭಾನುವಾರ ಬೆಂಕಿಗೆ ಆಹುತಿ ಘಟನೆ ನಡೆದು ಕಾಫಿ ತೋಟದ ರೈತರಿಗೆ ದಿಕ್ಕೆ ತೋಚದಂತಾಗಿತ್ತು. ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಹೆತ್ತೂರು ಹೋಬಳಿ ಬೆಳೆಗಾರರ ಸಂಘದ , ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರ ಸಂಘ ಹಾಗೂ ಜಿಲ್ಲಾ ಬೆಳೆಗಾರ ಸಂಘದ ಅಧ್ಯಕ್ಷರು, ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿಗೆ ಆಹುತಿಯಾದ ಕಾಫಿ ಗಿಡಗಳ ಹಾಗೂ ಜಮೀನನ್ನು ವೀಕ್ಷಣೆ ಮಾಡಿದರು.ತೋಟದ ಮಾಲೀಕರೊಂದಿಗೆ ಮಾತನಾಡಿದ ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರು ನಾವು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿ ಕೂಡಲೇ ಪರಿಹಾರದ ವ್ಯವಸ್ಥೆ ಮಾಡಿಕೊಡಲು ಒತ್ತಾಯಿಸುವುದಾಗಿ ಹೇಳಿದರು.ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೇಶಕರಾದ ಶ್ರೀಧರ್ ಮಾತನಾಡಿ ” ಈ ಭಾಗದ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳು ಹಾಗೂ ಅಧಿಕಾರಿಗಳ ಗಮನಕ್ಕೆ ನಮ್ಮ ಸಂಘವು ಗಮನಕ್ಕೆ ತರುತ್ತಿದ್ದು, ಇದುವರೆಗೆ ಯಾವುದೇ ರೀತಿಯ ಸಮರ್ಪಕವಾದ ಪರಿಹಾರ ಸಿಗದೆ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಈಗ ಈ ಬೆಂಕಿ ಅನಾಹುತದಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಈಗಲಾದರೂ ಸಂಬಂಧ ಪಟ್ಟ ಇಲಾಖೆಯವರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರವನ್ನು ರೈತರಿಗೆ ಕೊಡುವ ಮೂಲಕ ಕಾಫಿ ಬೆಳೆಗಾರರ ಏಳಿಗೆಗೆ ಸ್ಪೂರ್ತಿದಾಯಕವಾಗಬೇಕೆಂದು ಒತ್ತಾಯಿಸಿದರು.ನಂತರ ಹಾಸನ ಜಿಲ್ಲಾ ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಪಿ ಕೃಷ್ಣೇಗೌಡ ಮಾತನಾಡಿ ಬೆಂಕಿಗೆ ಆಹುತಿಯಾದ ಈ ಪ್ರದೇಶವು ಕಾಫಿ ತೋಟ ಜೊತೆಗೆ ಅಕ್ಕಪಕ್ಕದ ಎತ್ತರದ ಪ್ರದೇಶ ಪ್ರವಾಸಿ ತಾಣವು ಆಗಿತ್ತು.ಆಕಸ್ಮಿಕವಾಗಿ ತಗಲಿದ ಬೆಂಕಿ ರೈತರ ಕಾಫಿ ತೋಟ ಹಾಗೂ ಪ್ರವಾಸಿ ತಾಣವಾಗಿದ್ದ ಪ್ರದೇಶವನ್ನು ನಾಶ ಮಾಡಿದ್ದು, ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವ ಮೂಲಕ ಸಂಕಷ್ಟದಲ್ಲಿ ಸಿಲುಕಿದ ರೈತರಿಗೆ ಆಶಾಕಿರಣವಾಗಬೇಕು . ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲಾತಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಿ ಪರಿಹಾರಕ್ಕೆ ಪತ್ತಾಯಿಸಲಾಗುವುದು.”ಎಂದು ತಿಳಿಸಿದರು.ಒಟ್ಟಾರೆ ಬೆಂಕಿ ಆಗುತ್ತಿಯಾಗಿ ಸಂಕಷ್ಟದಲ್ಲಿ ಸಿಲುಕಿದ ಕಾಫಿ ಬೆಳೆಗಾರರ ತೋಟಕ್ಕೆ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಸಂಘದ ಸದಸ್ಯರು ಭೇಟಿ ನೀಡಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆಯಂತೂ ನೀಡಿದ್ದಾರೆ. ಆದಷ್ಟು ಬೇಗ ಈ ನೊಂದ ರೈತರಿಗೆ ಪರಿಹಾರ ಸಿಗುವಂತಾಗಲಿ ಎಂದು ವೈಚಾರಿಕ ಪತ್ರಿಕೆಯ ಮೂಲಕ ಕೇಳಿಕೊಳ್ಳುತ್ತೇವೆ.ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ದೇವರಾಜು ಹೆಚ್ ಜಿ. ,ಮಾಜಿ ಅಧ್ಯಕ್ಷರಾದ ಸಚಿನ್ . ,ಹಾಸನ ಜಿಲ್ಲಾ ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಶ್ರೀ ಕೃಷ್ಣೇಗೌಢ ,ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೇಶಕರಾದ ಶ್ರೀಧರ್ ,ವಳಲಹಳ್ಳಿ ಗ್ರಾಮ ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಲು, ಜಂಟಿ ಕಾರ್ಯದರ್ಶಿಯಾದ ಕರಡಿಗಾಲ ಅರುಣ್ ಗೌಡ, ದರ್ಶನ್,ಖಜಾಂಚಿಗಳ‍ಾದ ಮಧು ,ಮಾಜಿ ಉಪಾಧ್ಯಕ್ಷ ರಾದ ಸುರೇಶ್, ಸುಧರ್ಶನ್ ಗ್ರಾಮಸ್ಥರಾದ ಶ್ರೀ ರಾಜು ಸುರೇಶ್ ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *