ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್‌ ಅವರ ಬಂದೂಕು ಪರವಾನಗಿಯನ್ನು ರದ್ದು ಮಾಡಿರುವುದನ್ನು ವಿರೋದಿಸಿ ಇಂದು ಹೋಬಳಿ ಬೆಳೆಗಾರರ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳ ಮುಖೇನ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಹಿಂದೆ ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ ಅವರು 2004ರಿಂದ 2008ರ ವರೆಗೆ ಸಕಲೇಶಪುರ-ಆಲೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಬಹಳ ಉತ್ತಮ ಕೆಲಸಮಾಡಿರುತ್ತಾರೆ. ಅವರ ಅವಧಿಯಲ್ಲಿ ಕಾಡಾನೆ ಸಮಸ್ಯೆ , ತುಂಬಾ ಇತ್ತು ಸಾವು ನೋವುಗಳು ಕೂಡ ಸಂಭವಿಸಿದ್ದು, ಪ್ರತಿಯೊಂದು ಘಟನೆಯನ್ನು ಅವರು ಕಣ್ಣಾರೆ ಕಂಡಿದ್ದು, ಸರ್ಕಾರ ಮತ್ತು ಅರಣ್ಯ ಇಲಾಖೆಯ ಗಮನಸೆಳೆದಿರುತ್ತಾರೆ. ಆದರೂ ಸಹ ಯಾವುದೇ ಪರಿಹಾರ ದೊರಕಿರುವುದಿಲ್ಲ. ಅಂದಿನಿಂದ ಇದುವರೆಗೂ ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ಬೆಳೆಗಾರರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡುತ್ತಿರುತ್ತಾರೆ. ಆದರೂ ಕಾಡಾನೆ ಮತ್ತು ಇತರೆ ಕಾಡುಪ್ರಾಣಿಗಳ ಹಾವಳಿಯು ದಿನೇ ದಿನೇ ಹೆಚ್ಚಾಗುತ್ತಾ ಇದ್ದು, ಅರಣ್ಯ ಇಲಾಖೆಯವರು ಕಳೆದ 2 ವರ್ಷಗಳಿಂದ ಆನೆ ಹಾವಳಿಯಿಂದ ಸ್ವಲ್ಪ ಮಟ್ಟಿಗೆ ನಿಯಂತ್ರಿಸಲು ಆರ್.ಆರ್. ಟಿ. ಮತ್ತು ಟಾಸ್ಕ್ ಫೋರ್ಸ್ ಎಂಬ ಪಡೆಗಳನ್ನು ನೇಮಿಸಿದ್ದು, ಹಿಡುವಳಿ ಜಮೀನಿನಲ್ಲಿ ರೈತರು ಬೆಳೆದ ಬೆಳೆಯನ್ನು ಮೇಯಿಸುತ್ತಿದ್ದಾರೆ. ರೈತರ ಪರಿಸ್ಥಿತಿಯ ಬಗ್ಗೆ ಮಾತ್ರ ಗಮನಹರಿಸುತ್ತಿಲ್ಲ. ಅವರ ಪರಿಸ್ಥಿತಿಯನ್ನು ಸರ್ಕಾರ ಅರ್ಥಮಾಡಿಕೊಳ್ಳುತ್ತಿಲ್ಲ. ಕೆಲವು ಸಂದರ್ಭದಲ್ಲಿ ಮನೆಯವರ ಕಣ್ಣೆದುರೇ ಅವರ ಮನೆಯವರನ್ನು ಆನೆ ತುಳಿದು ಕೊಂದಿದೆ . ಇಂತಹ ಹಲವು ದೃಶ್ಯಗಳನ್ನು ಹೆಚ್.ಎಂ. ವಿಶ್ವನಾಥ್ ಅವರು ಕಣ್ಣಾರೆ ಕಂಡು ಹೋರಾಟ ಮಾಡಿರುತ್ತಾರೆ. ಸಾರ್ವಜನಿಕ ಸಭೆಯಲ್ಲಿ, ಕಾಡಾನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ವ್ಯಕ್ತಿಯ ಸಂತಾಪ ಸೂಚಕ ಸಭೆಯಲ್ಲಿ ಹಾಗು ಅಧಿಕಾರಿಗಳ ಸಭೆಯಲ್ಲಿ, ನನ್ನ ತೋಟದಲ್ಲಿ ಆನೆಗಳಿದ್ದು ನನ್ನ ಮೇಲೆ ಕಾಡಾನೆ ದಾಳಿಗೆ ಮುಂದಾದರೆ ನನ್ನ ಆತ್ಮ ರಕ್ಷಣೆಗಾಗಿ ನಾನು ಗುಂಡು ಹೊಡೆಯುತ್ತೇನೆ ಎಂದು ಹೇಳಿರುತ್ತಾರೆ. ತದನಂತರ ತಮ್ಮ ಹೇಳಿಕೆಯ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿರುತ್ತಾರೆ. ಅದಾದನಂತರ ಅವರ ಬಂದೂಕು ಮತ್ತು ಲೈಸೆನ್ಸ್ ಡೆಪಾಸಿಟ್ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಗಳು ಕೇಳಿದ ವಿಷಯಕ್ಕೆ ಪತ್ರ ಮುಖೇನ ಉತ್ತರವನ್ನು ಹೆಚ್. ಎಂ. ವಿಶ್ವನಾಥ್‌ ಅವರು ನೀಡಿರುತ್ತಾರೆ.ನಂತರ ಈ ವಿಷಯದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಹಾಗು ಜಿಲ್ಲಾ ಉಸ್ತುವಾರಿ ಸಚಿವರುಗಳು ಮೌಖಿಕವಾಗಿ ಈ ವಿಷಯವನ್ನು ಅಲ್ಲಿಗೆ ಮುಗಿಸುವಂತೆ ತಿಳಿಸಿರುತ್ತಾರೆ. ಆದರೂ ಜಿಲ್ಲಾಧಿಕಾರಿಗಳು ಹೆಚ್.ಎಂ. ವಿಶ್ವನಾಥ್‌ ಅವರ ಲೈಸೆನ್ಸ್ ಮತ್ತು ಬಂದೂಕನ್ನು ಅಮಾನತು ಮಾಡಿರುವುದಕ್ಕೆ ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗು ಇತರೆ ಸಂಘಟನೆಗಳು ಖಂಡಿಸುತ್ತವೆ.ಈ ವಿಷಯವು ಬೆಳೆಗಾರರ ತೀರ್ಮಾ ೯ನವನ್ನು ವಾಪಾಸ್ಸು ಪಡೆದು ಬಂದೂಕನ್ನು ವಾಪಾಸ್ ನೀಡಬೇಕೆಂದು ವಾಪಸ್ಸು ನೀಡದೇ ಇದ್ದ ವೇಳೆಯಲ್ಲಿ ಬೆಳೆಗಾರರು ಸಭೆ ನಡೆಸಿ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆಈ ಸಂದರ್ಭದಲ್ಲಿ ಬೆಳೆಗಾರರ ಸಂಘದ ಅದ್ಯಕ್ಷ ಮೋಹನ್ ಕುಮಾರ್, ಹೋಬಳಿ ಬೆಳೆಗಾರರ ಸಂಘದ ಸದ್ಯಕ್ಷ ಕೌಡಳ್ಳಿ ಲೋಹಿತ್, ರಾಜೀವ್ , ಬೆಕ್ಕನಹಳ್ಳಿ ನಾಗರಾಜು,ಕೃಷ್ಣಪ್ಪ, ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *