ಹೊಳೆನರಸೀಪುರ: ಪ್ರೀತಿಸಿ ಮದುವೆಯಾದ ಪತ್ನಿ ಹಾಗೂ ಆಕೆಯ ಮನೆಯವರು ನಿರಂತರವಾಗಿ ನೀಡಿದ ಕಿರುಕುಳದಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಗ್ರಾಮದ ಸುಜಾತಾ ಎಂಬುವವರ ಮಗ ಕಿರಣ್ ಬಿ.ಬಿ (26) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.ಕಿರಣ್‌, ದಂಡಿಗನಹಳ್ಳಿ ಹೋಬಳಿ ವಗರಹಳ್ಳಿ ಗ್ರಾಮದ ವಾಸು ಅವರ ಮಗಳು ಸ್ಪಂದನಾ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆ ನಂತರ ಸ್ಪಂದನಾ ಕಿರಣ್‍ನೊಂದಿಗೆ ಸಂಸಾರ ನಡೆಸದೇ ಚಿನ್ನಾಭರಣ ಮತ್ತು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳು. ಸ್ಪಂದನಾ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಮೂವರು ಸೇರಿ ಕಿರಣ್‌ಗೆ ಕಿರುಕುಳ ನೀಡಲು ಆರಂಭಿಸಿದರು.

ಮಾ.2 ರಂದು ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿ ನೀಡಿ ಕಿರಣ್‍ನನ್ನು ಜೈಲಿಗೆ ಕಳುಹಿಸಿದ್ದರು. ಕಿರಣ್, ಜಾಮೀನಿನ ಮೇಲೆ ಬಿಡುಗಡೆಯಾದರೂ ಕಿರುಕುಳ ನಿಂತಿರಲಿಲ್ಲ. ಜು.9 ರಂದು ಉದಯಪುರ ಬೇಕರಿ ಹತ್ತಿರ ವಾಸು, ಗೀತಾ, ರತ್ನಮ್ಮ ಅವರು ಕಿರಣ್ ಮೇಲೆ ಹಲ್ಲೆ ಮಾಡಿ, ಗಲಾಟೆ ಮಾಡಿದ್ದರು. ನಂತರ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಗೆ ದೂರು ನೀಡಿ ಕಿರಣನನ್ನು ಮತ್ತೆ ಜೈಲಿಗೆ ಕಳುಹಿಸಿದ್ದರು.

ಸುಜಾತಾ ಅವರ ತಂದೆ ನಾಗಣ್ಣಗೌಡ ಅವರು ಜು.24 ರಂದು ಕಿರಣ್‌ಗೆ ಜಾಮೀನು ಕೊಡಿಸಿ, ಮಳಲಿಯ ತಮ್ಮ ಎಂಬುವರ ಮನೆಯಲ್ಲಿ ಇಟ್ಟುಕೊಂಡಿದ್ದರು. ಆದರೆ ಜೈಲಿನಿಂದ ಬಿಡುಗಡೆಯಾದರೂ, ಪತ್ನಿ ಹಾಗೂ ಆಕೆಯ ಮನೆಯವರು ನೀಡಿದ ಕಿರುಕುಳದಿಂದ ಮಾನಸಿಕವಾಗಿ ನೊಂದಿದ್ದ ಕಿರಣ್, ಜು.31 ರಂದು ರಾತ್ರಿ 8.30ರಲ್ಲಿ ಮನೆಯಿಂದ ಹೊರಗೆ ಬಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಿರಣ್ ಆತ್ಮಹತ್ಯೆಗೆ ಕಾರಣರಾದ ಸ್ಪಂದನಾ, ವಾಸು, ರತ್ನಮ್ಮ, ವಾಸು ಸ್ನೇಹಿತರಾದ ರತ್ನಮ್ಮ, ಅವರ ಮಗ ತಮ್ಮಯ್ಯ, ತಮ್ಮಯ್ಯನ ಸ್ನೇಹಿತ ಕಾಂತರಾಜು ಎಂಬುವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಿರಣ್‌ ತಾಯಿ ಸುಜಾತಾ ಹೊಳೇನರಸೀಪುರ ನಗರ ಠಾಣೆಗೆ ದೂರು ನೀಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *