ಜೀವನ ‘ಸಾರ್ಥಕ’ ಅಂತ ಅನ್ನಿಸಬೇಕಾದರೆ ಜೀವನದಲ್ಲಿ ‘ನೆಮ್ಮದಿ’ ಎನ್ನುವುದು ಬಹಳ ಮುಖ್ಯ ಕಷ್ಟ ಸುಖ ಎಲ್ಲರ ಜೀವನದಲ್ಲಿಯೂ ಇರುತ್ತವೆ.’ಸಮಸ್ಯೆಗಳೇ ಇಲ್ಲ’ ಎನ್ನುವವರು ಯಾರು ಇಲ್ಲ.ಸಮಸ್ಯೆಯನ್ನು ಎದುರಿಸಿದಾಗಲೇ ನಮ್ಮ ಶಕ್ತಿ,ಸಾಮರ್ಥ್ಯಗಳು ಗಟ್ಟಿಯಾಗುತ್ತಾ ಹೋಗುತ್ತವೆ.

ಎಲ್ಲವನ್ನು ನೀನು ಹೇಗೆ ಸಮರ್ಥವಾಗಿ ಎದುರಿಸಿ,ಮಾನಸಿಕವಾಗಿ ನೆಮ್ಮದಿಯನ್ನು ಕಂಡುಕೊಳ್ಳುವೆ ಎನ್ನುವುದು ಬಹಳ ಮಹತ್ವದ್ದು. ನೆಮ್ಮದಿಯನ್ನುಹಣದಿಂದ ಎಂದಿಗೂ ಕೊಂಡುಕೊಳ್ಳಲಾಗದು.ಹಣ, ಹೆಸರಿನ ಹಿಂದೆ ನಾಗಲೋಟದಿಂದಓಡುತ್ತಿರುವ ಇಂದಿನ ಕಾಲದಲ್ಲಿ ಜೀವನದಲ್ಲಿ ತೃಪ್ತಿ, ಮಾನಸಿಕ ನೆಮ್ಮದಿ ಎನ್ನುವುದು ಮರೀಚಿಕೆಯೇ ಆಗಿದೆ.

ಇದಕ್ಕೆ ಅಪವಾದವೆನ್ನುವಂತೆ.. ನನ್ನ ಸ್ನೇಹಿತರಾದ ರಘು ಪಾಳ್ಯ ರವರು ಕರವೇ ಸಂಘಟನೆಯಿಂದ ಸಮಸ್ಯೆಗಳ ಹೋರಾಟದೊಂದಿಗೆ ಒಳ್ಳೆಯ ಕೊಡುವ ಮನಸ್ಸು ಕೂಡ ರೂಡಿಸಿಕೊಂಡಿದ್ದಾರೆ, ಇವರು ಕಳೆದ 15ವರ್ಷಗಳಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸತತವಾಗಿ ಪ್ರತಿ ವರ್ಷ ಒಂದೊಂದು ಶಾಲೆಗೆ ಕೊಡುಗೆಯಾಗಿ ನಿಡುತ್ತಾ ಬಂದಿರುತ್ತಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ 38 ಸಾವಿರ ಬೆಲೆಯ ಸಮವಸ್ತ್ರ , ಟೈ , ಐಡಿ ಕಾರ್ಡ್, ಬೆಲ್ಟ್ , ಕಲೀಕಾ ಸಾಮಗ್ರಿಗಳನ್ನು ಸುಮಾರು 50 ವಿದ್ಯಾರ್ಥಿಗಳಿಗೆ ಪಾಳ್ಯ ಹೋಬಳಿಯ ಗುಂಡನ ಬೆಳ್ಳುರು ಸರ್ಕಾರಿ ಶಾಲೆಗೆ ನೀಡಿದ್ದಾರೆ.

ಸಮಾಜ ಸೇವೆ ಹೋರಾಟಗಳ ಜೊತೆಯಲ್ಲಿ ರಘು ರವರು ಸಂತೋಷ ಸಂತೃಪ್ತಿ ಕಾಣುತ್ತಿದ್ದಾರೆ, ಕೊಡಬೇಕೆಂಬ ಉಸ್ತುಕತೆ ಅವರಲ್ಲಿ ಸದಾ ಹಸಿರಾಗಿರುತ್ತದೆ. ಕೊಡುವ ಕೈಗೆ ಭಗವಂತ ಸಕಲವನ್ನು ಕರುಣಿಸಲಿ.

ಯಡೇಹಳ್ಳಿ”ಆರ್”ಮಂಜುನಾಥ್

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *