
ಸಕಲೇಶಪುರ.ತಾಲ್ಲೂಕಿನ ಯಸಳೂರು ಗ್ರಾಮ ಪಂಚಾಯಿತಿಯ ಎರಡನೇ ಹಂತದ ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆ ಇಂದು ನಡೆಯಿತು.
ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮನು ಪರಮೇಶ ರವರು ಆರು ಮತಗಳ ಪಡೆದು ಆಯ್ಕೆಯಾದರು .ಇವರ ಸ್ಪರ್ಧಿ ಸುಶೀಲಮ್ಮ ನಾಲ್ಕು ಮತ ಪಡೆದು ಪರಾಜಿತರಾದರು.
ಹಾಗೆಯೇ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದ ಪುಟ್ಟಲಕ್ಷ್ಮಿಯವರು ಆರು ಮತಗಳನ್ನು ಪಡೆದು ಆಯ್ಕೆಯಾದರು .ಇವರ ಸ್ಪರ್ಧಿ ಆದ ಸುನೀತರವರು ನಾಲ್ಕು ಮಾತು ಪಡೆದು ಪರಾಜಿತರಾದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್. ಕೆ. ಕುಮಾರಸ್ವಾಮಿ ರವರು ಅಧ್ಯಕ್ಷರನ್ನು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸಚಿನ್ ಪ್ರಸಾದ್ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಲಿ ಸದಸ್ಯರುಗಳು ಮುಖಂಡರುಗಳು ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.




