ಬಂಡೀಪುರ ಅರಣ್ಯಾಧಿಕಾರಿಗಳ ಸರಳ ಉಪಾಯದಿಂದ ಮಾನವ- ಆನೆ ಸಂಘರ್ಷ ನಿಯಂತ್ರಣಕ್ಕೆ ಬಂದಿದೆ.

ಮೈಸೂರು: ಬಂಡೀಪುರ ಅರಣ್ಯಾಧಿಕಾರಿಗಳ ಸರಳ ಉಪಾಯದಿಂದ ಮಾನವ- ಆನೆ ಸಂಘರ್ಷ ನಿಯಂತ್ರಣಕ್ಕೆ ಬಂದಿದೆ. ಆನೆ ನಿರೋಧಕ ಕಂದಕ (ಇಪಿಟಿ) ಹಾಗೂ ಕೃಷಿ ಭೂಮಿಯ ಜಾಗದ ನಡುವೆ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, ಆನೆಗಳಿಗೆ ಮನುಷ್ಯನ ಇರುವಿಕೆ ಇರುವ ಪ್ರದೇಶಗಳಿಗೆ ಬಾರದಂತೆ ತಡೆಯೊಡ್ಡಲಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳ ಉಪಾಯ ಇದಾಗಿದ್ದು, ಈ ಹಿಂದೆ ಆನೆಗಳು ಅರಣ್ಯದ ಗಡಿ ಭಾಗದಲ್ಲಿರುವ ಗ್ರಾಮಗಳಿಗೆ ದಾಂಗುಡಿ ಇಡುತ್ತಿದ್ದದ್ದು ಸಾಮಾನ್ಯವಾಗಿತ್ತು. ನಿಯಂತ್ರಕ ಕ್ರಮವಾಗಿ ಅರಣ್ಯ ಸಿಬ್ಬಂದಿಗಳು ಆನೆ ನಿರೋಧಕ ಕಂದಕವನ್ನು ತೋಡಿದ್ದರು ಆದರೆ ಆನೆಗಳು ಗ್ರಾಮ ಪ್ರವೇಶಿಸುವುದು ಮುಂದುವರೆದಿತ್ತು.

1 ಕಿ.ಮೀ ವ್ಯಾಪ್ತಿಗೆ ಬ್ಯಾರಿಕೇಡ್ ಗಳನ್ನು ಹಾಕಲು ರೈಲ್ವೆ ಇಲಾಖೆಯಿಂದ ರೈಲು ಕಂಬಿಗಳನ್ನು 1.3 ಕೋಟಿ ರೂಪಾಯಿ ನೀಡಿ ಖರೀದಿಸಲಾಗಿತ್ತು. ಆದರೂ ಅರಣ್ಯ ಸಿಬ್ಬಂದಿಗಳಿಗೆ ಆನೆಗಳು ಬ್ಯಾರಿಕೇಡ್ ದಾಟದಂತೆ ಮಾಡಲು ಸಾಧ್ಯವಾಗಿರಲಿಲ್ಲ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *