ಸಾರ್ವಜನಿಕರ ತೆರಿಗೆ ಹಣದಲ್ಲಿ ಸರ್ಕಾರ ‘ಗ್ಯಾರಂಟಿ’ಗಳನ್ನು ನೀಡುತ್ತಿದೆ. ಆದರೆ, ಗ್ಯಾರಂಟಿ ಜಾರಿ ಮಾಡುವುದರಲ್ಲಿ ನಿರತವಾಗಿ ಅನ್ನದಾತರನ್ನ ಮರೆತಿದ್ದಾರೆ ಎಂದು ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿ ರೇವಣ್ಣ, ಹಾಸನ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಹರಿಸಲು ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.’ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಎರಡೂವರೆ ತಿಂಗಳಾಗುತ್ತಿದೆ.

ಒಂದು ತಿಂಗಳ ಹಿಂದೆಯೇ ನಾಲೆಗಳಿಗೆ ನೀರು ಹರಿಸಬೇಕು ಎಂದು ಜಿಲ್ಲಾ ಉಸ್ತವಾರಿ ಸಚಿವರಿಗೆ ಮನವಿ ಮಾಡಿದ್ದೆ. ಹೇಮಾವತಿ ಡ್ಯಾಂನಲ್ಲಿ ಸುಮಾರು 27 ಟಿಎಂಸಿ ನೀರಿದೆ. ಈ ನಾಲೆಗಳ ಅಡಿಯಲ್ಲಿ ಸುಮಾರು 34000 ಎಕರೆ ಅಚ್ವುಕಟ್ಟು ಕೃಷಿ ಪ್ರದೇಶವಿದೆ. ಮಂಡ್ಯ, ತುಮಕೂರು, ಹಾಸನ ಜಿಲ್ಲೆಯ ಕೆಲವು ಕಡೆ ಕೆರೆ ಕಟ್ಟೆ ಒಣಗಿ ಹೋಗುತ್ತಿವೆ. ರೈತರು ಸಾಲಸೋಲ ಮಾಡಿ ಬೆಳೆ ಬೆಳೆಯುತ್ತಾರೆ. ನಾಲೆಯಲ್ಲಿ ನೀರೇ ಇಲ್ಲವಾದಲ್ಲಿ ಬೆಳೆ ಹೇಗೆ ಬೆಳೆಯುತ್ತಾರೆ’ ಎಂದು ರೇವಣ್ಣ ಸರ್ಕಾರವನ್ನು ಪ್ರಶ್ನಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *