
ಸಕಲೇಶಪುರ.ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 136 ಟಿಎಂಇ 2023, ದಿನಾಂಕ 08.08.2023ರ ವರ್ಗಾವಣೆ ಪಟ್ಟಿಯಲ್ಲಿನ ಕ್ರಮ ಸಂಖ್ಯೆ: 5 ರಲ್ಲಿ ಶ್ರೀ ಜಯಣ್ಣ, ಮುಖ್ಯಾಧಿಕಾರಿ, ಸಕಲೇಶಪುರ ಪುರಸಭೆ ಇವರನ್ನು ಮುಖ್ಯಾಧಿಕಾರಿ, ಪುರಸಭೆ, ಕೆ.ಆರ್.ನಗರ ಹುದ್ದೆಗೆ ವರ್ಗಾಯಿಸಿರುವುದನ್ನು ಮಾರ್ಪಡಿಸಿ, ಸದರಿಯವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಸಕಲೇಶಪುರ ಪುರಸಭೆಯ ಮುಖ್ಯಾಧಿಕಾರಿ ಹುದ್ದೆಯಲ್ಲಿಯೇ ಮುಂದುವರೆಸಿ ಆದೇಶಿಸಿದೆ.
ಉಳಿದಂತೆ, ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 135 ಟಿಎಂಇ 2023, ದಿನಾಂಕ 08.08.2023ರಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಯ ಸರಕಾರದ ಅಧೀನ ಕಾರ್ಯದರ್ಶಿ ಮಂಜುನಾಥ್ ಆದೇಶ ನೀಡಿದ್ದಾರೆ
