
ಸಕಲೇಶಪುರ:- ಪಟ್ಟಣದಲ್ಲಿರುವ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಮುರುಳಿಮೋಹನ್ ಹಾಗೂ ಕೆಲವು ರಾಜಕೀಯ ಮುಖಂಡರುಗಳು ನಿಯಮ ಭಾಹಿರವಾಗಿ ಕ್ಷೇತ್ರದ ಶಾಸಕ ಸಿಮೆಂಟ್ ಮಂಜುರವರ ಅನುಪಸ್ಥಿತಿಯಲ್ಲಿ ಅಧಿಕಾರಿಗಳು ಹಾನುಬಾಳು ಹೋಬಳಿ ವೆಂಕಟಹಳ್ಳಿ ಗ್ರಾಮದಲ್ಲಿ ಸ್ವಾಗತ ಕಮಾನಿನ ಉದ್ಘಾಟನೆಯನ್ನು ಗ್ರಾಮ.ಪಂಚಾಯಿತಿ ಅಧ್ಯಕ್ಷ ರಿಂದ ಮಾಡಿಸಿರುವುದು ಖಂಡನೀಯವಾಗಿದೆ.
ಹಾನುಬಾಳು ಹೋಬಳಿಯ ವೆಂಕಟಹಳ್ಳಿ ಗ್ರಾಮದ ಸ್ವಾಗತ ಕಮಾನಿನ ಉದ್ಘಾಟನೆಗೆ ಶಾಸಕರನ್ನು ಗ್ರಾ.ಪಂ ಕಡೆಯಿಂದ ಆಹ್ವಾನಿಸಲಾಗಿತ್ತು, ಆದರೆ ತುರ್ತು ಕಾರ್ಯದ ಹಿನ್ನೆಲೆಯಲ್ಲಿ ಶಾಸಕರು ಉದ್ಘಾಟನೆಗೆ ಕೆಲ ನಿಮಿಷ ತಡವಾಗಿ ಬರುತ್ತೇನೆಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ತಿಳಿಸಿದ್ದರು, ಆದರೆ ಇದನ್ನು ತಿಳಿದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಹಾಗೂ ಕೆಲವು ಮುಖಂಡರು ಪಿಡಿಓಗೆ ಒತ್ತಡ ಹಾಕಿ ಕಮಾನಿನ ಉದ್ಘಾಟನೆ ಮಾಡಿಸಿದ್ದಾರೆ.
ಇದು ಶಾಸಕರ ಹಕ್ಕುಚ್ಯುತಿಗೆ ಧಕ್ಕೆ ಬಂದಿದ್ದು , ಹಕ್ಕು ಚ್ಯುತಿಯಾಗಲು ಅನುವು ಮಾಡಿಕೊಟ್ಟ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೆ ಇಲಾಖೆ ವಿಚಾರಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನೂತನ ಶಾಸಕರು ಸರಳ ಸಜ್ಜನ ಸ್ಥಳೀಯ ವ್ಯಕ್ತಿಯಾಗಿರುವುದರಿಂದ ಈ ವಿಷಯವನ್ನು ದೊಡ್ಡದು ಮಾಡಿಲ್ಲ, ಶಾಸಕರು ಎಲ್ಲಾ ವರ್ಗದವರನ್ನು ಒಟ್ಟಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ, ಇದನ್ನು ಸಹಿಸದ ಕೆಲವರು ಶಾಸಕರಿಗೆ ಅಧಿಕಾರಿಗಳ ಮೂಲಕ ವಿನಾಕಾರಣ ತೊಂದರೆ ಕೊಡಲು ಮುಂದಾಗುತ್ತಿದ್ದಾರೆ, ಶಾಸಕರಿಗೆ ಆಗಿರುವ ಅವಮಾನ ದಲಿತ ಸಮುದಾಯಕ್ಕೆ ಆದ ಅವಮಾನ ಇದರಿಂದ ನಮಗೆ ಬೇಸರ ಉಂಟಾಗಿದೆ, ಮುಂದಿನ ದಿನಗಳಲ್ಲಿ ಶಾಸಕರಿಗೆ ವಿನಾಃ ಕಾರಣ ಕಿರುಕುಳ ಕೊಡಲು ಯಾರಾದರು ಮುಂದಾದಲ್ಲಿ ನಮ್ಮ ಸಮುದಾಯದ ವತಿಯಿಂದ ತಕ್ಕ ಉತ್ತರ ನೀಡಲಾಗುತ್ತದೆ ಎಂದರು.
ಸುದ್ದಿಗೋಷ್ಟಿಯಲ್ಲಿ ದಲಿತ ಮುಖಂಡರುಗಳಾದ ಹಾನುಬಾಳು ಹೋಬಳಿ ದಲಿತ ಮುಖಂಡರುಗಳಾದ ಹುಲ್ಲಹಳ್ಳಿ ಅಣ್ಣಪ್ಪ, ವಸಂತ ಜಾನೆಕೆರೆ, ಅವಿನಾಶ್ ಹುರುಡಿ, ಮಂಜು ಹೆಗ್ಗದ್ದೆ, ಸುರೇಶ್ ಹಾನುಬಾಳು ಸೇರಿದಂತೆ ಇತರರು ಹಾಜರಿದ್ದರು.
