
ಸಕಲೇಶಪುರ : ಕಾಡಾನೆ ಒಂದು ಮನೆಯ ಬಳಿ ತೋಟದ ಪಕ್ಕದಲ್ಲಿದ್ದ ಮಹಿಳೆಯ ಮೇಲೆ ದಾಳಿ ನಡೆಸಿರುವ ಘಟನೆ ತಾಲೂಕಿನ ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡೂರು ಗ್ರಾಮದಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ.
ಬೇಲೂರು ತಾಲೂಕಿನ ನಾರ್ವೆ ಗ್ರಾಮದ ಕೂಲಿ ಕಾರ್ಮಿಕ ಮಹಿಳೆ ವಿಧವೆ ಕವಿತ (37) ದಾಳಿಗೊಳಗಾದ ಮಹಿಳೆಯಾಗಿದ್ದಾರೆ.
ಕವಿತಾ ವಡೂರು ಗ್ರಾಮದವರಾಗಿದ್ದು ನಾರ್ವೆ ಗ್ರಾಮಕ್ಕೆ ವಿವಾಹ ಮಾಡಿಕೊಡಲಾಗಿತ್ತು ನೆನ್ನೆ ತಾಯಿ ಮನೆಗೆ ಬಂದಿದ್ದ ಕವಿತ ಎಂಬ ಮಹಿಳೆ ಕಾಫಿ ತೋಟದ ಪಕ್ಕದ ಇದ್ದ ವೇಳೆ ಏಕಾಏಕಿ ದಾಳಿ ನಡೆಸಿರುವ ಕಾಡಾನೆ ಮಹಿಳೆಯ ಸೊಂಟದ ಭಾಗಕ್ಕೆ ಬಲವಾಗಿ ತುಳಿದಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ಸ್ಥಳೀಯರು ಹಾಗು ಅರಣ್ಯ ಇಲಾಖೆ ಸಿಬ್ಬಂದಿಗಳ ನೆರವಿನಿಂದ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.ಸದ್ಯ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.


