
ಸಕಲೇಶಪುರ : ಪ್ರಧಾನ ಮಂತ್ರಿ ಫೋಷಣ್ ಶಕ್ತಿ ನಿರ್ಮಾಣ್ (ಮಧ್ಯಾಹ್ನ ಉಪಾಹಾರ ಯೋಜನೆ) ಯೋಜನೆಯ ಭಾಗವಾಗಿ ಹೆತ್ತೂರು- 2023-24ನೇ ಸಾಲಿನಿಂದ 1ರಿಂದ 10ನೇ ತರಗತಿ ಮಕ್ಕಳಿಗೆ (ವಿಶೇಷವಾಗಿ 8&9 ನೇ ತರಗತಿ) ಬಿಸಿಯೂಟದೊಂದಿಗೆ ಬೇಯಿಸಿದ ಮೊಟ್ಟೆ ಅಥವಾ ಬಾಳೆಹಣ್ಣು ಅಥಾವ ಶೇಂಗಾ ಚಿಕ್ಕಿ ವಿತರಿಸುವ ಕಾರ್ಯಕ್ರಮವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆತ್ತೂರು ಇದರ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸಚಿನ್ ಹೆಚ್.ಎಂ. ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಡಯೆಟ್ ಉಪನ್ಯಾಸಕರಾದ ಶ್ರೀ ಮಂಜೇಗೌಡ, ಕೆಪಿಎಸ್ ಪ್ರಾಂಶುಪಾಲರಾದ ಮಂಜುನಾಥ ಬಿ.ಡಿ., ಉಪಪ್ರಾಂಶುಪಾಲೆ ಶ್ರೀಮತಿ ಲತಾ ಬಿ.ಕೆ.,ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್, ಶಿಕ್ಷಕ ವೃಂದ ಮತ್ತು ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




