
ಸಕಲೇಶಪುರ : ಕಾಡಾನೆ ಮಾನವ ಸಂಘರ್ಷದಿಂದ ಸಕಲೇಶಪುರದ ಜನತೆಯ ಬದುಕು ಅಸ್ತವ್ಯಸ್ತವಾಗಿದೆ..
ಕಾಡಾನೆ ದಾಳಿಯಿಂದ ಸರಣಿ ಸಾವುಗಳಾದರೂ ಎಚ್ಚತ್ತು ಕೊಳ್ಳದ ಸರ್ಕಾರಗಳು ಈಗ ಕಾಡಾನೆ ದಾಳಿಯಿಂದ ಬಲಿಯಾದ ಮಹಿಳೆಗೆ ನ್ಯಾಯ ಕೊಡಿಸಲು ಹೋರಾಟ ಮಾಡಿದ ಹೋರಾಟಗಾರರನ್ನು ಬಂಧಿಸಿರುವುದನ್ನು ಜಯ ಕರ್ನಾಟಕ ಜನಪರ ವೇದಿಕೆ ಖಂಡಿಸುತ್ತದೆ.
ಎಡೆಹಳ್ಳಿ ಆರ್. ಮಂಜುನಾಥ್, ಸಾಗರ್ ಜಾನೇಕೆರೆ ಹಾಗೂ ಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ಜಯಕರ್ನಾಟಕ ಜನಪರ ವೇದಿಕೆಯಿಂದ ಅಗ್ರಹಿಸುತ್ತೇವೆ ಉಬೈದ್ ಬಾಳ್ಳು (ಅಧ್ಯಕ್ಷರು. ಬೆಳಗೋಡು ಹೋಬಳಿ ಘಟಕ ಜಯಕರ್ನಾಟಕ ಜನಪರ ವೇದಿಕೆ)
