
ಕರ್ನಾಟಕ ರಾಜ್ಯ ಬರಹಗಾರರ ಸಂಘ ರಾಜ್ಯ ಘಟಕ ಹೂವಿನ ಹಡಗಲಿಯ ಸಂಘಕ್ಕೆ ಸಕಲೇಶಪುರ ತಾಲೂಕಿನ ಅಧ್ಯಕ್ಷರಾಗಿ ವಿಶ್ವಾಸ್ .ಡಿ.ಗೌಡರವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ಮಧು ನಾಯ್ಕ ಲಂಬಾಣಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಹುಮುಖ ಪ್ರತಿಭೆಯಾದ, ಸದಾ ಕ್ರಿಯಾಶೀಲರಾಗಿರುವ ಶ್ರೀ ವಿಶ್ವಾಸ್. ಡಿ. ಗೌಡರವರು ಸಾಹಿತಿಗಳಾಗಿ ,ಉತ್ತಮ ಸಂಘಟಕರಾಗಿ, ಲೇಖಕರಾಗಿ, ಅಂಕಣಕಾರರಾಗಿ, ಉದ್ದಿಮೆದಾರರಾಗಿ, ಪತ್ರಕರ್ತರಾಗಿದ್ದು,ಇವರ ಎಲ್ಲಾ ಕ್ಷೇತ್ರದ ಅನನ್ಯ ಸೇವೆಯನ್ನು ಗಮನಿಸಿ ಸಕಲೇಶಪುರ ತಾಲ್ಲೂಕಿನ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ಮಧು ನಾಯ್ಕ ಲಂಬಾಣಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆಯಾಗಿರುವ ವಿಶ್ವಾಸ್ . ಡಿ.ಗೌಡ ರವರಿಗೆ ಕುಟುಂಬದವರು, ಹಾಸನದ ಜಿಲ್ಲಾ ಅಧ್ಯಕ್ಷ ರಾದಂತ ಗೊರೂರು ಅನಂತರಾಜುರವರು, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆಗಿರುವ ಶ್ರೀಮತಿ ಎಚ್.ಎಸ್. ಪ್ರತಿಮಾ ಹಾಸನ್ ರವರು, ಪತ್ರಿಕಾ ಬಳಗದವರು ಮತ್ತು ಹಿರಿಯ ,ಕಿರಿಯ ಸಾಹಿತಿಗಳು ಸಮಾಜ ಸೇವಕರೆಲ್ಲರೂ ಅಭಿನಂದನೆಗಳನ್ನು ತಿಳಿಸಿದ್ದಾರೆ.


