ಭಾರತ ದೇಶದ ಐತಿಹಾಸಿಕ ಮೈಲಿಗಲ್ಲಾದ ಚಂದ್ರಯಾನ -3 ಯಶಸ್ವಿ ಉಡಾವಣೆ ಆಗಿದ್ದು ಇಂದು ಸಂಜೆ ಸಾಫ್ಟ್-ಲ್ಯಾಂಡ್ ಆಗಲು ದೇಶದ ವಿಜ್ಞಾನಿಗಳು 4 ವರ್ಷ ಅವಿರತ ಪರಿಶ್ರಮದ ಫಲವಾಗಿ ಇಂದು ವಿಶ್ವಕ್ಕೆ ಮಾದರಿಯಾಗುವ ಕ್ಷಣಗಣನೆ ಸಂಪೂರ್ಣ ಯಶಸ್ವಿ ಆಗಲಿ ಎಂದು ಸಕಲವನ್ನೂ ಕರುಣಿಸುವ ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿ ಹೆಚ್ ಪಿ ಮುಖಂಡ ರಘು ಸಕಲೇಶಪುರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಎಡಪಂಥೀಯ ಚಿಂತನೆ ಹೊಂದಿರುವ ಮತ್ತು ದೇಶದ ವಿರುದ್ಧ ಪಿತೂರಿ ಮಾಡುವ ಚಲನಚಿತ್ರ ನಟ ಪ್ರಕಾಶ್ ರಾಜ್ ಹೇಳಿಕೆ ಖಂಡನೀಯವಾದದ್ದು ವಿಜ್ಞಾನಿಗಳ ಮಾನಸಿಕತೆ ಕುಗ್ಗಿಸುವಂಥಹ ಹೇಳಿಕೆ ನೀಡುತ್ತಿರುವ ಪ್ರಕಾಶ ರಾಜ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸದರು.

ವಿಶೇಷ ಪೂಜೆ ಸಂದರ್ಭದಲ್ಲಿ ಬಜರಂಗದಳ ಸಹ ಸಂಯೋಜಕ ಶಿವೂ @ಜಿಪ್ಪಿ, ವಿ.ಹೆಚ್.ಪಿ ಮುಖಂಡರಗಳಾದ ದುಷ್ಯಂತ್ ಗೌಡ, ಶೇಖರ್ ಕಬ್ಬಿನಗದ್ದೆ, ಅನುರಾಗಭಟ್ ಉಪಸ್ಥಿತಿ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *