
ಸಕಲೇಶಪುರ : ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಅವರ ಪರ ಇಂದು ಚುನಾವಣಾ ಪ್ರಚಾರಕ್ಕೆ ಆಗಮಿಸಿದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಟಿ ರವಿ ಸಕಲೇಶಪುರದ ಆಶ್ರಿತ ಹೋಟೆಲ್ ಸಮೀಪ ಬಂದಂತ ಸಂದರ್ಭದಲ್ಲಿ ಸಿಮೆಂಟ್ ಮಂಜು ಹಾಗೂ ಬಿಜೆಪಿ ಕಾರ್ಯಕರ್ತರು ಏಲಕ್ಕಿ ಹಾರ ಹಾಕುವ ಮೂಲಕ ಅವರನ್ನು ಬರಮಾಡಿಕೊಂಡರು , ಇಂದು ತಾಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಟಿ ರವಿಯವರು ಸಿಮೆಂಟ್ ಮಂಜು ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
