ಅದ್ದೂರಿಯಾಗಿ ನೆಡೆದ ಕರಗೂರಿನ ಇತಿಹಾಸ ಪ್ರಸಿದ್ಧ ದೇವಿರಮ್ಮಸುಗ್ಗಿ ಉತ್ಸವ. ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿಯ ಕರಗೂರು ಗ್ರಾಮದ ಇತಿಹಾಸ ಪ್ರಸಿದ್ದವಾದ ಶ್ರೀ ದೇವಿರಮ್ಮ ಅವರ ವರ್ಷಕೊಮ್ಮೆ ಚ್ರೈತ್ರಮಾಸ, ಶುಕ್ಲ ಪಕ್ಷದಲ್ಲಿ ನಡೆಯುವ ಸುಗ್ಗಿ ಉತ್ಸವವೂ, ಭಕ್ತಿ ಪೂರ್ವಕವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು.ಮಳೆಗಾಲ ಪ್ರಾರಂಭವಾಗಿ ಗ್ರಾಮೀಣ ಭಾಗದ ಜನರು ಕೃಷಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗಬಾರದು, ಉತ್ತಮ ಮಳೆಯಾಗಿ ಗ್ರಾಮ ಸುಭೀಕ್ಷೆಯಿಂದಿರಬೇಕು, ಗ್ರಾಮದ ಕಲ್ಯಾಣಕ್ಕಾಗಿ ಗ್ರಾಮದೇವರಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವುದಕ್ಕೆ ಸುಗ್ಗಿ ಉತ್ಸವಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಗ್ರಾಮಸ್ಥರು ಉತ್ಸಾಹದಿಂದ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಪುರಾತನ ಇತಿಹಾಸ ಇರುವ ಈ ದೇವಸ್ಥಾನಕ್ಕೆ ಹಿರಿಯರು ಹಿಂದೆಯಿಂದ ನಡೆಸಿಕೊಂಡು ಬಂದ ಈ ಸುಗ್ಗಿ ಹಬ್ಬದ ಸಂಪ್ರದಾಯದಂತೆ ಸುಗ್ಗಿಯು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯು ಸಂಪ್ರದಾಯದಂತೆ ಕರಗೂರಿನ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸೇರಿ ಸುಗ್ಗಿ ಮಹೋತ್ಸವ ಅದ್ದೂರಿಯಾಗಿ ನಡೆಸಲಾಯಿತು.ಗುರುವಾರ ಸಾರು ಹಾಕುವ ಮೂಲಕ ಗ್ರಾಮದಲ್ಲಿ ಹಬ್ಬದ ವಾತಾವರಣಕ್ಕೆ ಕಳೆಕಟ್ಟಿತು.ಶುಕ್ರವಾರ ಹೊನ್ನಾರು ಸುಗ್ಗಿ , ಶನಿವಾರ ರಾತ್ರಿಪೂರ ಬಿಲ್ಲುಸುಗ್ಗಿ ಮಾಡುವ ಜೊತೆಗೆ, ಭಾನುವಾರ ಮಡೆಬನದಲ್ಲಿ ಮಡಿವಂತಿಕೆಯಿಂದ ದೇವರಿಗೆ ನೈವೆದ್ಯ ಮಾಡಿ. ಸೋಮವಾರ ಬೆಳಿಗ್ಗೆ ದೇವಿಗೆ ಮಲ್ಲು ಬೆಳಗುವ ಮೂಲಕ ಭಕ್ತಾಧಿಗಳು ಸಂಭ್ರಮ ಆಚರಿಸಿದರು. ನಂತರ ಹಗಲು ಸುಗ್ಗಿ ನೆರೆದಿದ್ದ ಭಕ್ತಾದಿಗಳನ್ನು ಹಾಗೂ ಗ್ರಾಮಸ್ಥರನ್ನು ಖುಷಿಯ ಜೊತೆ ಭಕ್ತಿಯ ಕಡಲಲ್ಲಿ ತೆಳಿಸಿತ್ತು.ತಿಂಡಿ ತಿನಿಸು ವ್ಯಾಪಾರದೊಂದಿಗೆ ಜಾತ್ರೆಯ ರಂಗು ಕಟ್ಟಿತ್ತು. ದೇವರಿಗೆ ಹರಕೆ ಹೊತ್ತವರು,ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.ನಂತರ ದೇವರಿಗೆ ಹಣ್ಣು ಕಾಯಿ ಜೊತೆಗೆ ಹರಕೆ ತೀರಿಸುವ ಕಾರ್ಯಕ್ರಮಗಳು ಸಂಪ್ರದಾಯದಂತೆ ಶಾಸ್ತ್ರೋತ್ರವಾಗಿ ಮಾಡಲಾಯಿತು.ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದು ದೇವರ ದರ್ಶನ ಪಡೆದು ಪುನೀತರಾದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *