
ಸೋಷಿಯಲ್ ಮೀಡಿಯಾದಲ್ಲಿ ಅಕೌಂಟ್ ಕ್ರಿಯೇಟ್ ಮಾಡಿದ ತಕ್ಷಣ ಯಾವ್ ಯಾವ್ ಸುದ್ದಿ, ಪೋಸ್ಟ್ ಹಾಕೋದಲ್ಲ.
ಈಗಾಗಲೇ ಇದ್ದವರೂ ಸತ್ಯಾಸತ್ಯತೆ ಪರಿಶೀಲಿಸದೇ ಶೇರ್ ಮಾಡೋದಲ್ಲ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅಕೌಂಟ್ ಇದೆ ಅಂತ ನೀವು ಸುಳ್ಳುಸುದ್ದಿ ಶೇರ್, ಪೋಸ್ಟ್ ಮಾಡಿದ್ರೇ, ನಿಮ್ಮ ವಿರುದ್ಧ ಕಾನೂನು ಕ್ರಮ ಫಿಕ್ಸ್ ಆಗಲಿದೆ.
ಇದಕ್ಕಾಗಿ ರಾಜ್ಯದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗ್ ಪ್ಲಾನ್ ಮಾಡಿಕೊಳ್ಳಲಾಗಿದೆ. ತಮ್ಮ ಠಾಣೆಗಳ ವ್ಯಾಪ್ತಿಯಲ್ಲಿ ಹರಿದಾಡೋ ಸೋಷಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿನ ಕೋಮು ಸೌಹಾರ್ದತೆ, ದ್ವೇಷ, ಅಸೂಹೆ ಮೂಡಿಸೋ ಪೋಸ್ಟ್ ಗಳ ಮೇಲೆ ಹದ್ದಿನ ಕಣ್ಣು ನಡೆಸಲಾಗಿದೆ.
ಆಯಾ ಠಾಣೆ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣ ಮಾತ್ರದಲ್ಲಿ ವೈರಲ್ ಆಗೋ ಪೋಸ್ಟ್, ಪೋಟೋ, ವೀಡಿಯೋಗಳ ಬಗ್ಗೆ ಸೂಕ್ಷ್ಮಾತಿ ಸೂಕ್ಷ್ಮವಾಗಿ ಗಮನಿಸಲು ಸಿಬ್ಬಂದಿಗಳನ್ನು ಕೂಡ ನಿಯೋಜಿಸಲಾಗಿದೆ.
ಆ ಪೊಲೀಸ್ ಸಿಬ್ಬಂದಿಗಳು ನಿಮ್ಮ ಸೋಷಿಯಲ್ ಮೀಡಿಯಾ ಆಕ್ಟಿವಿಟೀಸ್ ಗಳನ್ನು ಗಮನಿಸುತ್ತಿರುತ್ತಾರೆ.ಈಗಾಗಲೇ ಬೆಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದು ಆರಂಭಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಆಯುಕ್ತ ದಯಾನಂದ್ ಅವರು, ನಗರದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಇಬ್ಬರು ಎಕ್ಸ್ ಪರ್ಟ್ ಗಳನ್ನು ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ಬಗ್ಗೆ ಗಮನಿಸೋದಕ್ಕೆ ನೇಮಿಸಲಾಗಿದೆ ಎಂದಿದ್ದಾರೆ.
ತಾಂತ್ರಿಕ ಪರಿಣತಿ ಹೊಂದಿರುವಂತ ಇವರು, ತಪ್ಪಿತಸ್ಥರನ್ನು ಪತ್ತೆ ಹಚ್ಚುವಂತ ಕೆಲಸ ಮಾಡಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ವಿವಾದಿತ ಪೋಸ್ಟ್ ಗಳನ್ನು ಮಾಡಿದಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸೋದನ್ನ ತಡೆಯೋ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ ಮಾಡೋರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾರೆ.
