ರಕ್ಷಾಬಂಧನವು ಭಾರತದಲ್ಲಿ ಬಹಳ ಮುಖ್ಯವಾದ ಹಬ್ಬವಾಗಿದೆ. ಈ ದಿನ ಸಹೋದರ ಸಹೋದರಿಯ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಇದು ಹೆಚ್ಚು ವಿಶೇಷವಾಗಿದೆ. ಇದನ್ನು ಶ್ರಾವಣ ಮಾಸದ ಕೊನೆಯ ದಿನ ಅಥವಾ ಈ ತಿಂಗಳ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ.
2023 ರಲ್ಲಿ ರಕ್ಷಾ ಬಂಧನ ಅಥವಾ ರಾಖಿ ಹಬ್ಬ ಎರಡು ದಿನ ಆಚರಿಸಲಾಗುತ್ತದೆ. ಆಗಸ್ಟ್ 30 ಬುಧವಾರದಂದು ಬೆಳಿಗ್ಗೆ 10:58 ರಿಂದ ಆಗಸ್ಟ್ 31ರ ಗುರುವಾರದಂದು ಬೆಳಿಗ್ಗೆ 7:05ವರೆಗೆ ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ. ಸುಂದರವಾದ ರಕ್ಷಾಬಂಧನ ಸಂದೇಶದೊಂದಿಗೆ ನಿಮ್ಮ ಸಹೋದರನಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಸಹೋದರ ನಿಮಗೆ ಎಷ್ಟು ಮುಖ್ಯ ಎಂದು ಸಂದೇಶಗಳ ಮೂಲಕ ತಿಳಿಸಿ.ರಕ್ಷಾ ಬಂಧನದ ಶುಭಾಶಯಗಳು….