ಆಹಾರ ಇಲಾಖೆಯು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ನೀಡಿದ್ದು, ಸೆಪ್ಟೆಂಬರ್ 1 ರಿಂದ 10 ರವರೆಗೆ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿ ಮಾಡಬಹುದಾಗಿದೆ.

ಸೆಪ್ಟೆಂಬರ್ 1 ರಿಂದ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಮಾಡಲು ಆಹಾರ ಇಲಾಖೆ ಅವಕಾಶ ನೀಡಿದ್ದು, ಪಡಿತರ ಚೀಟಿದಾರರು ಅಗತ್ಯ ದಾಖಲೆಗಳೊಂದಿಗೆ ಹೆಸರು ಸೇರ್ಪಡೆ ಮಾಡಬಹುದಾಗಿದೆ.

ಪಡಿತರ ಚೀಟಿಗೆ ಹೆಸರು ಸೇರಿಸುವುದು/ತಿದ್ದುಪಡಿ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಪಡಿತರ ಚೀಟಿಯಲ್ಲಿ ಹೆಸರು ಸೇರಿಸುವುದು ಬಹಳ ಮುಖ್ಯ. ಕುಟುಂಬದ ಯಾವುದೇ ಸದಸ್ಯರ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸುವ ಕೆಲಸವನ್ನು ಕೆಲವೇ ನಿಮಿಷದಲ್ಲಿ ಮಾಡಬಹುದು. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಪಡಿತರ ಚೀಟಿಗೆ ಹೆಸರು ಸೇರಿಸಬಹುದು.

ಇದಕ್ಕೆ ಬೇಕಾಗುವ ದಾಖಲೆಗಳ ಮಾಹಿತಿ ಇಲ್ಲಿದೆ.

ಮಗುವಿನ ಹೆಸರು ಸೇರ್ಪಡೆ : ಪಡಿತರ ಚೀಟಿಯಲ್ಲಿ ಮಗುವಿನ ಹೆಸರನ್ನು ಸೇರಿಸಬೇಕಾದರೆ, ಮನೆಯ ಮುಖ್ಯಸ್ಥರ ಪಡಿತರ ಚೀಟಿ, ಮಗುವಿನ ಜನನ ಪ್ರಮಾಣಪತ್ರ ಮತ್ತು ಇಬ್ಬರ ಪೋಷಕರ ಆಧಾರ್ ಕಾರ್ಡ್ ಅಗತ್ಯವಿರುತ್ತದೆ.

ಹೊಸ ಸದಸ್ಯರ ಹೆಸರು ಸೇರ್ಪಡೆ : ಮದುವೆಯಾದ ನಂತ್ರ ಮನೆಗೆ ಬರುವ ಸೊಸೆಯ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಬೇಕಾಗುತ್ತದೆ. ಮಹಿಳೆಯ ಆಧಾರ್ ಕಾರ್ಡ್, ಮದುವೆ ಪ್ರಮಾಣಪತ್ರ, ಗಂಡನ ಪಡಿತರ ಚೀಟಿಯ ಫೋಟೋ ಕಾಪಿ ನೀಡಬೇಕು. ಹಾಗೆ ಆಕೆಯ ತಂದೆ ಮನೆಯ ರೇಷನ್ ಕಾರ್ಡ್ ನಲ್ಲಿರುವ ಹೆಸರನ್ನು ತೆಗೆಯಬೇಕು.ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಾದ್ರೆ ಹತ್ತಿರದ ಆಹಾರ ಪೂರೈಕೆ ಕೇಂದ್ರಕ್ಕೆ ಹೋಗಬೇಕು.

ಎಲ್ಲಾ ಅಗತ್ಯ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಬೇಕು. ಹೊಸ ಸದಸ್ಯರ ಹೆಸರನ್ನು ಸೇರಿಸುವ ಅರ್ಜಿ ಭರ್ತಿ ಮಾಡಬೇಕು. ಅರ್ಜಿ ಶುಲ್ಕವನ್ನು ಜಮಾ ಮಾಡಬೇಕು. ನಮೂನೆಯನ್ನು ಸಲ್ಲಿಸಿದ ನಂತರ, ಅಧಿಕಾರಿಗಳು ರಶೀದಿಯನ್ನು ನೀಡುತ್ತಾರೆ. ರಶೀದಿಯ ಮೂಲಕ, ಆನ್ಲೈನ್ ​​ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *