
ಸಕಲೇಶಪುರ -ಆಲೂರು.ನಿನ್ನೆ ಆನೆ ದಾಳಿಯಿಂದ ಮೃತರಾದ ವೆಂಕಟೇಶ್ ರವರ ಅಂತಿಮ ದರ್ಶನ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಸ್ಥಳೀಯ ಶಾಸಕ ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಸತ್ಯಭಾಮ .
ಈ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಭೆ ನಡೆಸಿ ಪರಿಹಾರ ಘೋಷಣೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿ ಎಪ್ ಒ ಮೋಹನ್ ಕುಮಾರ್, ಎ ಸಿ ಎಪ್ ಮಹದೇವ್, ತಾಲ್ಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ದಯಾನಂದ, ಕಾಂಗ್ರೆಸ್ ಮುಖಂಡ ಹೊನ್ನವಳ್ಳಿ ಗಣೇಶ್, ಬಿಜೆಪಿ ಮುಖಂಡರಾದ ಕಾಳಿಂಗ, ಪೂವಯ್ಯ, ಜೆ ಡಿ ಎಸ್ ಮುಖಂಡರಾದ ಎಸ್ ಡಿ ಆದರ್ಶ್, ಭಾಸ್ಕರ್, ಸಂತೋಷ್ ಇತರರು ಇದ್ದರು.



