150 ಕೆ.ಜಿ ಅಷ್ಟು ಗೋಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಓಮ್ನಿ ವಾಹನ ಸಹಿತ ಒಬ್ಬ ಆರೋಪಿ ಪೋಲಿಸ್ ವಶಕ್ಕೆ. ಬಜರಂಗದಳ ಕಾರ್ಯಕರ್ತರ ಕಾರ್ಯಾಚರಣೆ.ಸಕಲೇಶಪುರ – ಸಕಲೇಶಪುರ ನಗರದಲ್ಲಿ ದಿನೇ ದಿನೇ ಅಕ್ರಮ ಗೋಸಾಗಾಟ ಗೋಮಾಂಸ ಮಾರಾಟ ಬೆಳಕಿಗೆ ಬರುತ್ತಾಳೆ ಇದೆ.ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಹಾಸನ ಕಡೆಯಿಂದ KA 14 M 3492 ಮಾರುತಿ ಓಮ್ನಿ ಕಾರಿನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿರುವ ಖಚಿತ ಮಾಹಿತಿ ಪಡೆದಿದ್ದ ಬಜರಂಗದಳ ಕಾರ್ಯಕರ್ತರ ಒಂದು ತಂಡ ಕಾರ್ಯಾಚರಣೆಯಲ್ಲಿತ್ತು.ಬಾಳ್ಳುಪೇಟೆಯಿಂ ಓಮ್ನಿ ವಾಹನವನ್ನು ಹಿಂಬಾಲಿಸಿಕೊಂಡು ಬಂದಿದ್ದ ಬಜರಂಗದಳ ಕಾರ್ಯಕರ್ತರು ಕೊಳ್ಳಹಳ್ಳಿ ಸಮೀಪಿಸುತ್ತಿದ್ದಂತೆ ಸಕಲೇಶಪುರ ನಗರ ಪೊಲೀಸ್ ಇನ್ಸ್ಪೆಕ್ಟರ್’ಗೆ ಮಾಹಿತಿ ನೀಡಿದರು.ನಗರದಲ್ಲಿ ವಾಹನ ದಟ್ಟಣೆ ಇದ್ದ ಕಾರಣ ಅನುಮಾನ ಬರದಂತೆ ಓಮ್ನಿ ವಾಹನವನ್ನು ಹಿಂಬಾಲಿಸಿಕೊಂಡು ಬಂದು ನಗರದ ಕಸಬಾ ಪಂಚಾಯತ್ ವ್ಯಾಪ್ತಿಯ ಮಳಿಗೆ’ಗಳ ಮುಂಭಾಗ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವಾಹನವನ್ನು ಅಡ್ಡಗಟ್ಟಿದ್ದರು ಮೊದಲೇ ಮಾಹಿತಿ ಪಡೆದಿದ್ದ ಪೋಲಿಸರು ಕಾರ್ಯವೃತ್ತರಾಗಿ ತಕ್ಷಣ ಓಮ್ನಿ ಚಾಲಕ ಆರೋಪಿಯನ್ನು ವಶಕ್ಕೆ ಪಡೆದು ವಾಹನವನ್ನು ನಗರ ಠಾಣೆಗೆ ತೆಗೆದುಕೊಂಡು ಬಂದಿದ್ದಾರೆ.ನಗರ ಠಾಣೆಯಲ್ಲಿ ಓಮ್ನಿ ವಾಹನವನ್ನು ಪರಿಶೀಲಿಸಿದಾಗ ಚೀಲದಲ್ಲಿ ಗೋಮಾಂಸವನ್ನು ಕಟಾವು ಮಾಡಿ ಇಡಲಾಗಿತ್ತು. ಸರಿಸುಮಾರು 150 ಕೆ.ಜಿ ಅಧಿಕ ಗೋಮಾಂಸ ಇರುವ ಸಾಧ್ಯತೆ ಇದ್ದು. ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *