
ಆಲೂರು : ತಾಲ್ಲೂಕಿನ ಪಾಳ್ಯ ಹೋಬಳಿಯಲ್ಲಿ ಲಯನ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಆಲೂರು ತಾಲ್ಲೂಕು ಘಟಕದ ವತಿಯಿಂದ ಇಂದು ಯೋಗ ,ಧ್ಯಾನ ಹಾಗೂ ಪ್ರಾಣಾಯಾಮ ಶಿಬಿರ ಉದ್ಘಾಟನೆ ಮಾಡಲಾಯಿತು .
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭವ್ಯ ಪುರುಷೋತ್ತಮ್ ರವರು ವಹಿಸಿದ್ದರು .
ಈ ಸಂದರ್ಭದಲ್ಲಿ ಆಲೂರು ಲಯನ್ಸ್ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ್ ಹೆಚ್. ಜಿ., ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಟರಾಜ್ ಆರ್ ಎಸ್, ಬೆಳಗೋಡು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೇತ್ರಾವತಿ ಮಂಜುನಾಥ್, ಲಯನ್ಸ್ ಪ್ರಾಂತೀಯ ಅಧ್ಯಕ್ಷರಾದ ಜಗದೀಶ್ ರವರು, ಕಾರ್ಯದರ್ಶಿ ಆನಂದ್ ಟಿ ಆರ್, ಕೋಶಾಧಿಕಾರಿಯಾದ ರಾಮಚಂದ್ರ ಹಾಗೂ ರಘು ಪಾಳ್ಯ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ ಹಾಗೂ ಯೋಗ ಶಿಬಿರದ 30 ಶಿಭಿರಾರ್ಥಿಗಳು , ಆಲೂರು ಇಂಟರ್ ನ್ಯಾಷನಲ್ ಸಂಸ್ಥೆ ಆಲೂರಿನ ಸದಸ್ಯರು ಹಾಜರಿದ್ದರು.



