ಜೆಡಿಎಸ್ ಅಭ್ಯರ್ಥಿ ಎಚ್ ಕೆ ಕುಮಾರಸ್ವಾಮಿ ವ್ಯಕ್ತಿತ್ವ ಮತ್ತು ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗಬೇಕೆಂದು ಬಯಸಿ ಬಾಳ್ಳುಪೇಟೆಯಲ್ಲಿ ಶುಕ್ರವಾರ ರಾತ್ರಿ 40 ಕ್ಕೂ ಹೆಚ್ಚು ಮುಸ್ಲಿಂ ಯುವಕರು ಕಾಂಗ್ರೆಸ್ ತೊರೆದು ಬಾಳ್ಳುಪೇಟೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪಾಲಾಕ್ಷ್ ಬನವಾಸೆ ಹಾಗೂ ಜೆಡಿಎಸ್ ಯುವ ಮುಖಂಡ ಉದೀಶ್ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಪೆಟ್ರೋಲ್ ಬಂಕ್ ಲೋಕೇಶ್ ಕೆ ಎಸ್ ಆರ್ ಟಿ ಸಿ ಶಿವಣ್ಣ ಹಾಗೂ ಬಾಳ್ಳುಪೇಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರ ಪತಿ ರಾಜೇಶ್ ಅವರ ಸಮ್ಮುಖದಲ್ಲಿ ಯುವಕರು ಜೆಡಿಎಸ್ ಸೇರ್ಪಡೆ ಗೊಂಡರು . ಇದೆ ಸಂದರ್ಭದಲ್ಲಿ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಬೆಳಗೊಡು ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂಚಲ ಕುಮಾರಸ್ವಾಮಿ ಮುಸ್ಲಿಂ ಮುಖಂಡ ಯಾದ್ ಗಾರ್ ಇಬ್ರಾಹಿಂ ಕುಣಿಗನಹಳ್ಳಿ ಇಬ್ರಾಹಿಂ ಇದೆ ಸಮಯದಲ್ಲಿ ಜೆಪಿ ನಗರದ ಸಂತೋಷ್ ರವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ ಆದರು ಈ ಸಂದರ್ಭದಲ್ಲಿ ಬಾಳ್ಳುಪೇಟೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *