ಸಕಲೇಶಪುರ ‌: ತಾಲ್ಲೂಕಿನ ಹಾನುಬಾಳು ಪ್ರಾಥಮಿಕ ಶಾಲಾ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದ 2011-2012ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಾದ,ನವೀನ್, ಹರೀಶ್,ಸಚಿನ್, ಸುಮಂತ್,ವಿನೋದ್, ರಘು,ರವಿ ಇವರ ತಂಡ ತಮ್ಮ ಸ್ವಂತ ದುಡಿಮೆಯ ಶ್ರಮದಲ್ಲಿ ತಮ್ಮ ಕೈಲಾದ ಸೇವೆಯನ್ನು, 2023-24 ನೇ ಸಾಲಿನ ಪ್ರಾಥಮಿಕ ವಿಭಾಗದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿರುತ್ತಾರೆ.

ಈ ತಂಡದ ಸೇವೆಯನ್ನು ಗುರುತಿಸಿ, ಇನ್ನುಮುಂದೆಯೂ ಕೂಡ ತಮ್ಮ ನಿಸ್ವಾರ್ಥ ಸೇವೆ ಸದಾ ಹೀಗೆ ಇರಲಿ ಎಂದು ಶಾಲೆಯ ಎಸ್, ಡಿ, ಎಂ, ಸಿ ಯು ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು,ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು, ಪೋಷಕರ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *