
ಸಕಲೇಶಪುರ : ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಅರೆಕೆರೆ ಗ್ರಾಮದಲ್ಲಿ ಶುಕ್ರವಾರ ಗಾಳಿ ಮಳೆಗೆ ವಿಕಲಚೇತನ ಮಂಜಯ್ಯ ಎಂಬುವರ ಮನೆ ಕುಸಿದು ಹಾನಿ ಒಳಗಾಗಿತ್ತು , ವಿಷಯ ತಿಳಿದ ಕೂಡಲೇ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರ ತಂಡ ಭೇಟಿನೀಡಿದರು.
ಹಾನಿ ಒಳಗಾದ ಮನೆಯನ್ನು ಪರಿಶೀಲಿಸಿ ಮಳೆ ಹಾನಿ ಅನುದಾನದಲ್ಲಿ 5 ಲಕ್ಷದಲ್ಲಿ ಹೊಸ ಮನೆ ನಿರ್ಮಿಸಿಕೊಡಲು ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಚರ್ಚಿಸಿ ಗ್ರಾಮಅಭಿರುದ್ದಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಧಿಕಾರಿ ಸೇರಿದಂತೆ ಎಲ್ಲರಿಗೂ ಒಮ್ಮತದಿಂದ ಸರ್ಕಾರಕ್ಕೆ ವರದಿ ಸಿದ್ದಪಡಿಸಿ ಕಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಂಗನಾಥ್, ಗ್ರಾಮ ಅಭಿವೃದ್ಧಿ ಅಧಿಕಾರಿ ದರ್ಶನ್,ಶೆಟ್ಟಿ ಅರಕೆರೆ ಗ್ರಾಮ ಸದಸ್ಯರಾದಸರಿತಾ, ಮಾಜಿ ಉಪಾಧ್ಯಕ್ಷರಾದ ಚೆನ್ನಯ್ಯ, ಕಂದಾಯ ನಿರೀಕ್ಷಕರಾದ ಸುರೇಶ್, ಗ್ರಾಮ ಲೆಕ್ಕಿಗರಾದ ಅಶ್ವಿನಿ ಹಾಗೂ ಗ್ರಾಮಸ್ಥರು ಸೇರಿದ್ದರು.


