
ಸಕಲೇಶಪುರ.ಕೆ.ಎನ್ ರಾಜು ಮೂಲತಃ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಕರಡಿಗಾಲ ಗ್ರಾಮದವರಾಗಿದ್ದು, ತಾಲೂಕಿನ ಸುತ್ತ ಮುತ್ತ ಸುಮಾರು 17 ಶಾಲೆಯಲ್ಲಿ ಶಿಕ್ಷಕ ವೃತ್ತಿ ಜೀವನ ಮಾಡಿದ್ದಾರೆ.ಶಿಕ್ಷಕರಲ್ಲದೆ ಸಾಹಿತಿಗಳು ಆಗಿರುವ ಇವರು ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಶಿಕ್ಷಕರ ವೃತ್ತಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಇವರು ತಾಲೂಕಿನಾದ್ಯಂತ ಎಲ್ಲರೊಂದಿಗೆ ಸ್ನೇಹ ಸಂಬಂಧ ಹೊಂದಿರುವ ಇವರಿಗೆ ತಾಲೂಕಿನಾದ್ಯಂತ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೋಷಕ ವರ್ಗ ದವರು ಹಾಗೂ ಅಭಿಮಾನಿಗಳನ್ನು ಹೊಂದಿದ್ದು,31-012023 ರಂದು ನಿಡುಗೆರೆ ಶಾಲೆಯಲ್ಲಿ ನಿವೃತ್ತರಾಗುತ್ತಿದ್ದಾರೆ.
ತಮ್ಮ ವೃತ್ತಿ ಬದುಕಿನದ್ದಕ್ಕೂ ಸ್ವಲ್ಪವೂ ಕೂಡ ಕಪ್ಪು ಚುಕ್ಕೆ ಬರದಂತೆ ಮಾದರಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ಇಂದು ಸಂಜೆ ಹೃದಯಘಾತದಿಂದ ನಿಧನರಾಗಿದ್ದಾರೆ. ಎಂದು ತಿಳಿಸಲು ವಿಷಾದಿಸುತ್ತೇವೆ ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ. .
