ಸಕಲೇಶಪುರ :- ಕುರಬತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಕ್ರವಾರಸಂತೆಯಲ್ಲಿರುವ ಸುಬ್ಬಮ್ಮ ಕಾಂಪ್ಲೆಕ್ಸ್ ನಲ್ಲಿನೂತನ ಜನಪ್ರಿಯ ಕ್ಲಿನಿಕ್ ನ್ನು ಶ್ರೀ ಶ್ರೀ ಶ್ರೀ ಸದಾಶಿವ ಸ್ವಾಮೀಜಿಗಳು ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠ ಕೊಡ್ಲಿಪೇಟೆ ಇವರಿಂದ ಉದ್ಘಾಟನೆ ಮಾಡಲಾಯಿತು .

ಉತ್ತಮ ರೀತಿಯ ECG ಸೌಲಭ್ಯ ಹಾಗೂ ಉತ್ತಮ ರೀತಿಯ ವೈದ್ಯಕೀಯ ಸೌಲಭ್ಯವು ದೊರೆಯುತ್ತಿದ್ದು, ಇದರ ಸದುಪಯೋಗವನ್ನು ಸುತ್ತಮುತ್ತಲಿನ ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ವೈದ್ಯರಾದ ಅರ್ಶದ್ ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯರಾದ ಬೈರಮುಡಿಚಂದ್ರು, ಪಿ. ಎಲ್.ಡಿ ಬ್ಯಾಂಕ್ ನ ಅಧ್ಯಕ್ಷರಾಗಿದ್ದ ಉದಯ್,ಸಮಾಜ ಸೇವಕರಾದ ಶ್ರೀ ಜಯಣ್ಣ,ಶುಕ್ರವಾರಸಂತೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕಿರಣ್ , ತಮ್ಮೇಗೌಡರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಕೆ.ಡಿ., ಮಸೀದಿ ಗುರುಗಳು,ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *