ಆಲೂರು : ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ರೈತರು ಹಾಕಿದ ಬೆಳೆ ಸಂಪೂರ್ಣ ಒಣಗಿವೆ ಅದರೂ ಸರ್ಕಾರ ಆಲೂರು ತಾಲ್ಲೂಕನ್ನು ಬರಪೀಡಿತ ಪ್ರದೇಶ ಪಟ್ಟಿಯಿಂದ ಕೈ ಬಿಟ್ಟು ಮಲತಾಯಿ ದೊರಣೆ ಅನುಸರಿಸುತ್ತಿದೆ ಎಂದು ಕರುನಾಡ ವಿಜಯಸೇನೆ ಜಿಲ್ಲಾದ್ಯಕ್ಷ ಮೋಹನ್ ಕುಮಾರ್ ಮಾವನೂರು ಅಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದ್ದು ರೈತರು ತೊಂದರೆಯಲ್ಲಿದ್ದಾರೆ ಕೆಲ ರೈತರು ಇನ್ನೂ ಬಿತ್ತನೆ ಕೂಡ ಮಾಡಿಲ್ಲ ಮಾಡಿದ ಬೆಳೆಗಳು ಮಳೆಯಿಲ್ಲದೇ ಒಣಗಿಹೋಗಿವೆ.

ಜನರಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ ಮಳೆಯ ಅಭಾವದಿಂದ ಪ್ರಸ್ತುತ ವಿದಿಸುತ್ತಿರುವ ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದ ರೈತರು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಮಳೆಯ ಕೊರತೆಯಿಂದ ಅನಿಯಮಿತ ವಿದ್ಯುತ್ ಪೂರೈಸಲಾಗುತ್ತಿದೆ.

ಇಷ್ಟೆಲ್ಲ ಕೊರತೆಯಿದ್ದರೂ ಕೂಡ ಸರ್ಕಾರ ಬರಪ್ರದೇಶ ಪಟ್ಟಿಯಿಂದ ತಾಲ್ಲೂಕನ್ನು ಕೈ ಬಿಟ್ಟು ಮಲತಾಯಿ ದೋರಣೆ ಅನುಸರಿಸುತ್ತಿದೆ ಅದ್ದರಿಂದ ಈಗಲಾದರೂ ಸರ್ಕಾರ ಮತ್ತೊಮ್ಮೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ಬರಪೀಡಿತ ತಾಲ್ಲೂಕು ಎಂದು ಘೋಷಿಸಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *