
ಸಕಲೇಶಪುರ : ಸಕಲೇಶಪುರದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚು ತಲೆ ಇದ್ದು ಇದಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಕಾಡಾನೆ ದಾಳಿಯನ್ನು ತಡೆಗಟ್ಟಲು ಮುಂದಾಗಿರುವುದಿಲ್ಲ ಕಾಡಾನೆ ಮತ್ತು ಮಾನವ ಸಂಘರ್ಷವೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಹಾಗೂ ಮೃತಪಟ್ಟವರಿಗೆ ಸರ್ಕಾರದಿಂದ ಒಂದಿಷ್ಟು ಪರಿವಾರವನ್ನು ಕೊಟ್ಟು ಸಂತೈಸಿರುತ್ತಾರೆ .
ಈ ಕಾಡಾನೆ ದಾಳಿಯಿಂದ ಮೃತಪಟ್ಟ ವರಿಗೆ ಸರ್ಕಾರದಿಂದ ಹುತಾತ್ಮತಾರ ದಿನಾಚರಣೆಯನ್ನು ಸರ್ಕಾರ ಮತ್ತು ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ವತಿಯಿಂದ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವಂತೆ ಹಾಗೂ ಆ ದಿನವನ್ನು ಸರ್ಕಾರಿ ರಜೆ ದಿನವನ್ನಾಗಿ ಆಚರಿಸುವಂತೆ ಮಾಡಿಕೊಡಬೇಕೆಂದು, ಹುತಾತ್ಮರು 78 ಜನರ ಹೆಸರಿನಲ್ಲಿಯೂ ಹಾಗು ಹುತಾತ್ಮ ಆದ ದಿನಾಂಕವನ್ನು ಶಿಲಾ ಶಾಸನ ಅರಣ್ಯ ಇಲಾಖೆಯಲ್ಲಿ ಮಾಡಬೇಕು ಸಾರ್ವಜನಿಕರಿಗೆ ಹುತಾತ್ಮರ ದಿನಾಚರಣೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಉಪ ವಿಭಾಗಾಧಿಕಾರಿ ಹಾಗೂ ಅರಣ್ಯ ಇಲಾಖೆಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಹಾಸನ ಜಿಲ್ಲಾ ಅಧ್ಯಕ್ಷರಾದ ಜೀವನ್ ಗೌಡ, ತಾಲ್ಲೂಕು ಅಧ್ಯಕ್ಷರು ವಿಜಯ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಮಹೇಶ್, ತಾಲ್ಲೂಕು ಮಹಿಳಾ ಅಧ್ಯಕ್ಷರು ಸಹನಾ ಪುನೀತ್, ತಾ ಉಪಾಧ್ಯಕ್ಷರು ಭಾಸ್ಕರ್, ತಾ ಕಾರ್ಯದರ್ಶಿ ಮಂಜುನಾಥ್, ನಗರ ಉಸ್ತುವಾರಿ ಪ್ರದೀಪ್ ಮಾವಿನಹಳ್ಳಿ, ಗ್ರಾಮೀಣ ಕಾರ್ಯದರ್ಶಿ ವಿಜಯ್ ಗುಡಾಣಕೆರೆ, ನಗರ ಅಧ್ಯಕ್ಷರು ಸಂತೋಷ್ ಮುಂತಾದವರು ಇದ್ದರು.


