
ಆಲೂರು : ತಾಲ್ಲೂಕಿನ ರೈಲ್ವೆ ನಿಲ್ದಾಣಕ್ಕೆ ದಿಡೀರ್ ಬೇಟಿ ನೀಡಿದ ಶಾಸಕರಾದ ಸಿಮೆಂಟ್ ಮಂಜು.ಸುಮಾರು ಐದು ದಶಕಗಳಿಂದ ರೈಲು ನಿಲುಗಡೆಯಿಂದ ದೂರ ಉಳಿದಿದ್ದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಜಿಲ್ಲೆಯಲ್ಲೇ ಆಲೂರು ತಾಲ್ಲೂಕು ಅಭಿವೃಧ್ಧಿಯಲ್ಲಿ ಹಿಂದುಳಿಯಲು ಮುಖ್ಯಕಾರಣ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಇಲ್ಲದಿರುವುದೇ ಎಂದು ಹೇಳಿದರೆ ತಪ್ಪಾಗಲಾರದು, ಸುಸೂತ್ರವಾದ ನಿಲ್ದಾಣ,ಕಟ್ಟಡ ಕಛೇರಿ, ತಾಂತ್ರಿಕ ಕೊಠಡಿಗಳಿದ್ದರೂ ಕೂಡ ರೈಲು ನಿಲುಗಡೆ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶವಾಗಿದೆ ಹಾಗಾಗಿ ಈ ವಿಚಾರವನ್ನು ಕೂಡಲೆ ಸಂಭಂದಪಟ್ಟ ವಿಭಾಗೀಯ ಕಛೇರಿ ,ಸಂಸದರು,ಸಚಿವರನ್ನ ಬೇಟಿ ಮಾಡಿ ಸೂಕ್ತಪರಿಹಾರ ಮಾಡುತ್ತೇನೆ ಎಂದು ಸ್ಥಳದಲ್ಲಿಯೇ ಕರೆ ಮಾಡುವ ಮೂಲಕ ವಿಷಯವನ್ನು ಪ್ರಸ್ತಾಪಿಸಿದರು.
ಈ ಒಂದು ಕೆಲಸದಿಂದ ಬೆಂಗಳೂರು ಮಂಗಳೂರು ಸಂಚಾರಕ್ಕೆ ಉಪಯೋಗವಾಗುತ್ತದೆ,ನಗರ ಅಭಿವೃದ್ಧಿ, ಕೂಲಿ ಕಾರ್ಮಿಕರ ಜೀವನ,ಆಟೋ ಹಾಗೂ ಮಿನಿ ಕ್ಯಾಂಟಿನ್ ಕೆಲಸಗಾರರಿಗೆ ಜೀವನ ಕಲ್ಪಿಸುತ್ತದೆ ಎಂದರು.ಈ ಸಂಧರ್ಭದಲ್ಲಿ ತಾಲ್ಲೂಕಿನ ಎಲ್ಲಾ ಬಿಜೆಪಿ ಮುಖಂಡರು ,ಸ್ಥಳಿಯ ಮುಖಂಡರಿದ್ದರು.
