
ರಾಜ್ಯಾದ್ಯಂತ ಸಂಚಲನ ಮೂಡಿಸುತ್ತಿರುವ ಚೈತ್ರ ಕುಂದಾಪುರ ವಂಚನೆ ಪ್ರಕರಣದಲ್ಲಿ ವೃಕ್ಷಮಾತೆ ನಾಡೋಜ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಮತ್ತು ಆವರ ಮಗ ಉಮೇಶ್ ರವರ ಹೆಸರು ಬಳಕೆ ಮಾಡಿರುವುದು ಅಕ್ಷಮ್ಯ ಅಪರಾಧ.
ನಾಡಿನ ಗೌರವಾನ್ವಿತ ಸ್ಥಾನದಲ್ಲಿರುವ ವೃಕ್ಷಮಾತೆಯ ಹೆಸರು ಬಳಕೆ ಮಾಡಿ ಅವರಿಗೆ ಆಗೌರವ ತಂದಿರುವುದನ್ನು ನಾವು ಖಂಡಿಸುತ್ತೇವೆ. ಒಂದು ವೇಳೆ ಅವರು ಈ ವಿಚಾರವಾಗಿ ಹಸ್ತಕ್ಷೇಪ ಮಾಡಿದ್ದೇ ಆದಲ್ಲಿ ಸಿಸಿಬಿ ತನಿಖೆಯಾಗಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಅದನ್ನು ಬಿಟ್ಟು ಈ ರೀತಿಯಾಗಿ ವೃಕ್ಷ ಮಾತೆ ಮತ್ತು ಆವರ ಮಗನಾದ ಉಮೇಶ್ ರವರ ಹೆಸರಿಗೆ ಮಸಿ ಬಳಿಯುವ ಕಾರ್ಯ ಆಗದಿರಲಿ.
ನಮ್ಮ ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಧ್ಯಮದವರು ತಮ್ಮ ಉದ್ಯಮದ ಟಿ.ಆರ್. ಪೀ ಗಾಗಿ ಸಮಾಜದಲ್ಲಿ ಮಾದರಿಯಾಗಿ ಬದುಕಿರುವ , ತಮ್ಮ ಜೀವನವನ್ನೇ ಹಸಿರು ಸಮಾಜಕ್ಕಾಗಿ ಮುಡಿಪಾಗಿಟ್ಟರುವ ಜೀವದ ಬಗ್ಗೆ ಸುದ್ದಿ ಬಿತ್ತರಿಸುವ ವೇಳೆ ಸ್ವಲ್ಪ ಜವಾಬ್ದಾರಿಯ ಅರಿವು ಇರಲಿ. ಇಲ್ಲಸಲ್ಲದ ಆಪಾದನೆಗಳು ಇಳಿವಯಸ್ಸಿನ ಆ ತಾಯಿಯ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ವಂಚಕರ ಸುದ್ಧಿ ಬಿತ್ತರಿಸುವ ಬರದಲ್ಲಿ ಅಮಾಯಕರ ಚಾರಿತ್ರ್ಯ ವಧೆ ಮಾಡದಿರಿ.
ಸಾಗರ್ ಜಾನೇಕೆರೆಸಂಸ್ಥಾಪಕ ರಾಜ್ಯಾಧ್ಯಕ್ಷರು, ಮಲೆನಾಡು ರಕ್ಷಣಾ ಸೇನೆ ಕರ್ನಾಟಕ
